More

    ಕೊಂಕಣ್ ದಬಾಜೋ ನಾಟಕ ಪ್ರದರ್ಶನ

    ಕುಂದಾಪುರ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಜೆಬೆಲ್ ಆಲಿಯ ಕೊಂಕಣಿ ಸಂಘಟಕ ಜೆಬೆಲ್ ಆಲಿ ಕೊಂಕಣಿ ಕಮ್ಯುನಿಟಿ(ಜೆ.ಎ.ಕೆ.ಸಿ) ಸಂಸ್ಥೆಯಿಂದ ಜೆಬೆಲ್ ಆಲಿ(ನ್ಯೂ ದುಬಾಯ್) ಪ್ರದೇಶದ ಸಂತ ಫ್ರಾನ್ಸಿಸ್ ಅಸಿಸಿ ಚರ್ಚ್ ಸಭಾ ಭವನದಲ್ಲಿ ಕೊಂಕಣ್ ದಬಾಜೊ ನಾಟಕ ಜರುಗಿತು.

    ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಸಂಗೀತ ಸಂಜೆ, ನೃತ್ಯ, ಬ್ಯಾಂಡ್ ವಾದ್ಯ ಮತ್ತು ವಿಶೇಷವಾಗಿ ಕೊಂಕಣಿ ನಾಟಕ ಕೋಣ್‌ಯೀ ಕಾಂಯ್ ಉಣ್ಯಾರ್ ನಾಂ ಪ್ರದರ್ಶನಗೊಂಡಿತು.
    ಅಬುಧಾಬಿ ಮುಸ್ಸಾಫಾ ಪ್ರದೇಶದ ಸಂತ ಪಾವ್ಲ್ ಚರ್ಚ್ ಧರ್ಮಗುರು ಮ್ಯಾಕ್ಸಿಮ್ಾ ಕಾರ್ಡೊಜಾ ಮಾತನಾಡಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತವಾದುದು, ಅದನ್ನು ಮುಂದಿನ ಪೀಳಿಗೆಗೆ ನಾವು ಉಳಿಸಿ ಬೆಳೆಸಿ ಕಾಪಾಡಿಕೊಳ್ಳಬೇಕು ಎಂದರು.
    ಜೆಬೆಲ್ ಆಲಿ ಸಂತ ಫ್ರಾನ್ಸಿಸ್ ಅಸಿಸಿ ಚರ್ಚಿನ ಪ್ರಧಾನ ಧರ್ಮಗುರು ರೇನಿಹೊಲ್ಡ್ ಸೆನ್ನರ್, ನಾಟಕಗಾರ ಸಾಹಿತಿ ಬರ್ನಾಡ್ ಜೆ.ಕೋಸ್ತಾ ರಚಿಸಿದ ಯಶಸ್ವಿ ನಾಟಕ ಕೋಣ್‌ಯೀ ಕಾಂಯ್ ಉಣ್ಯಾರ್ ನಾಂ ಕೊಂಕಣಿ ನಾಟಕವನ್ನು ಜೆ.ಎ.ಕೆ.ಸಿ. ಯ ಸದಸ್ಯರು ಯಶಸ್ವಿಯಾಗಿ ಪ್ರದರ್ಶಿಸಿದರು.

    ವರ‌್ನನ್ ಡಿಸೋಜಾ, ಮಂಗಳೂರು ನಿರ್ದೇಶನದಲ್ಲಿ ಫ್ರಾಂಕ್ಲಿನ್ ರೊಡ್ರಿಗಸ್ ಸಂಗೀತ ನೀಡಿದ್ದಾರೆ. ಡೇವಿಡ್ ಲೋಬೊ ಬೈಂದೂರು. ಜೆನಿಫರ್ ಪಿಂಟೊ ಪಾಂಗ್ಳಾ, ಅವಿಲ್ ಡಿಕೋಸ್ತಾ, ಮೂಡುಬಿದ್ರೆ. ಜೆಸನ್ ಮಿರಾಂಡ, ಬೊಳಿಯೆ(ಮೂಡುಬೆಳ್ಳೆ) ರೇಶ್ಮಾ ಡಿಸೋಜಾ ವಾಮಂಜುರ್, ಜೊನಿಟಾ ಮಿನೇಜೆಸ್, ಪೆರ‌್ಮಾಲ್. ಪಾವ್ಲ್ ಡಿಸೋಜಾ, ಪಾಲಡ್ಕ. ಸ್ಟೀವನ್ ಲೋಬೊ, ಲೊರೆಟ್ಟೊ ಅಭಿನಯಿಸಿದ್ದರು.

    ರಿತೇಶ್ ಪಿಂಟೊ ಶಿರ್ವಾ ಮತ್ತು ಪ್ರೇಮ್ ಪೀಟರ್ ನಿರ್ವಹಿಸಿದರು. ಸಿರಿಲ್ ಬ್ಯಾಪ್ಟಿಸ್ಟ್ ನಾಟಕ ತಂಡದ ಸಂಯೋಜಕರಾಗಿದ್ದರು. ಜೆ.ಎ.ಕೆ.ಸಿ. ಯ ಪದಾಧಿಕಾರಿ ರೋಶನ್ ಚಾಕೊ ಸ್ವಾಗತಿಸಿದರು, ಲೆನಿಟಾ ನೊರೊನ್ಹಾ ನಿರೂಪಿಸಿದರು. ಕ್ಲೆರೆನ್ಸ್ ಪಿಂಟೊ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts