More

    ಸಂಸ್ಕಾರವಂತರ ಮನೆ ಸದಾ ಸುಭಿಕ್ಷ

    ಕೊಂಡ್ಲಹಳ್ಳಿ: ಉತ್ತಮ ಸಂಸ್ಕಾರದಿಂದ ಕೂಡಿರುವ ಮನೆ ಸದಾ ಸುಭಿಕ್ಷವಾಗಿರುತ್ತದೆ ಎಂದು ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

    ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ನಿತ್ಯವೂ ಗುರು ಹಿರಿಯರ ಸ್ಮರಣೆ ಮಾಡಬೇಕು. ಶಿಕ್ಷಣದಿಂದ ಕೌಟುಂಬಿಕ ಸಾಮರಸ್ಯ ಸಾಧ್ಯವಾಗುತ್ತದೆ. ಶಾಲೆಗಳು ಸಮಾಜ ಸುಧಾರಣೆಯ ಆಧಾರಸ್ತಂಭಗಳು. ಇಲ್ಲಿ ವಿದ್ಯೆ ಕಲಿವ ಮಕ್ಕಳಿಂದಲೇ ದೇಶದ ಪ್ರಗತಿ ಎಂಬ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಮಾತನಾಡಿ, ಹೆಚ್ಚು ಅಂಕ ಪಡೆಯುವುದೇ ಶಿಕ್ಷಣದ ಗುರಿಯಾಗಬಾರದು. ವೈಚಾರಿಕ ಮನೋಭಾವ, ನೈತಿಕತೆ ರೂಢಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

    ಕೆಎಸ್‌ಆರ್‌ಟಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಟಿ.ಪ್ರಭಾಕರ ಮಾತನಾಡಿ, ಪ್ರಸ್ತುತ ಸರ್ವ ಕ್ಷೇತ್ರಕ್ಕೂ ಇಂಗ್ಲಿಷ್ ಅಗತ್ಯವಿದೆ. ಈ ಭಾಷೆಯನ್ನು 1ನೇ ತರಗತಿಯಿಂದಲೇ ಕಲಿಸುವಂತಾದರೆ ಉನ್ನತ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅನುಕೂಲವಾಗುತ್ತದೆ ಎಂದರು.

    ಔಷಧ ನಿಯಂತ್ರಣ ಅಧಿಕಾರಿ ಬಿ.ಆರ್.ವೆಂಕಟೇಶ್, ನಿವೃತ್ತ ಡಿಡಿಪಿಐ ಆಂಥೋನಿ, ಉದ್ಯಮಿ ಗೌಡ್ರು ರುದ್ರಪ್ಪ, ತಾಪಂ ಸದಸ್ಯ ಟಿ.ರೇವಣ್ಣ, ನಿವೃತ್ತ ಶಿಕ್ಷಕರಾದ ಎನ್.ಅಪ್ಪಳ್ಳಿ, ಕೃಷ್ಣಯ್ಯ ಶೆಟ್ರು, ಟಿ.ಶರಣಪ್ಪ, ವಿ.ಮೇಘನಾಥ್, ಸದಾಶಿವಪ್ಪ, ಎಲ್.ಪರಮೇಶ್ವರಪ್ಪ, ಎಸ್.ಟಿ.ಬ್ರಹ್ಮಾನಂದಪ್ಪ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಕೆ.ಗುರುಲಿಂಗಪ್ಪ, ಎಸ್.ಪಿ.ರಾಜಣ್ಣ, ಕಸಾಪ ಅಧ್ಯಕ್ಷ ಡಿ.ಒ.ಮುರಾರ್ಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts