More

    ಕೊಂಡ್ಲಹಳ್ಳಿಯಲ್ಲಿ ಹೋಳಿಗೆಮ್ಮನ ಹಬ್ಬ

    ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿ, ಮೊಗಲಹಳ್ಳಿ, ಬಿ.ಜಿ.ಕೆರೆ, ಕೋನಸಾಗರ ಗ್ರಾಮದಲ್ಲಿ ಮಂಗಳವಾರ ಸಂಜೆ ಹೋಳಿಗೆಮ್ಮನ ಹಬ್ಬದ ಆಚರಿಸಲಾಯಿತು.

    ಕೊಂಡ್ಲಹಳ್ಳಿಯ ಆಂಜನೇಯ ಸ್ವಾಮಿ ಗುಡಿ ಎದುರು ಅಮ್ಮನ ಮೂರ್ತಿಯನ್ನು ಬೇವಿನಸೊಪ್ಪು, ಹಸಿರು ಬಳೆ, ಅರಿಶಿಣ ಕುಂಕುಮದಿಂದ ಅಲಂಕರಿಸಿ ಮೊರದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಹೊಳಿಗೆ ನೈವೇದ್ಯ ಅರ್ಪಿಸಲಾಯಿತು.

    ತೊಂದರೆಗಳ ನಿವಾರಣೆಯಾಗುವ ನಂಬಿಕೆಯಿಂದ ಹಳೆಯ ಪೊರಕೆ, ಮೊರ, ಜರಡಿ ಮತ್ತಿತರ ಹಳೆಯ ವಸ್ತುಗಳನ್ನು ತಂದು ಸೇರಿಸಲಾಯಿತು. ನಂತರ ಗ್ರಾಮದ ನಾಲ್ಕು ದಿಕ್ಕಿನಲ್ಲೂ ಅನ್ನದ ಓಕಳಿ ಚೆಲ್ಲಿ ಅಮ್ಮನ ಮೂರ್ತಿಯನ್ನು ಮೆರವಣಿಗೆ ಮೂಲಕ ಗಡಿಭಾಗಕ್ಕೆ ಕಳುಹಿಸಲಾಯಿತು. ಗ್ರಾಪಂ ಸದಸ್ಯ ವಿ.ಫಾಲಾಕ್ಷ, ರಾಧಮ್ಮ, ಹಿರಿಯರು, ಮಹಿಳೆಯರು, ಮಕ್ಕಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts