More

    ರೈತರಿಗೆ ಬ್ಯಾಂಕ್ ಸಾಲ ಸಕಾಲಕ್ಕೆ ಸಿಗಲಿ

    ಕೊಂಡ್ಲಹಳ್ಳಿ: ರೈತರಿಗೆ ಬ್ಯಾಂಕುಗಳು ಸಕಾಲಕ್ಕೆ ಆರ್ಥಿಕ ನೆರವು ನೀಡಿ ಅವರ ಪ್ರಗತಿಗೆ ಸಹಕರಿಸಬೇಕು ಎಂದು ಪ್ರಗತಿಪರ ರೈತ ಎಸ್.ಸಿ.ವೀರಭದ್ರಪ್ಪ ಮನವಿ ಮಾಡಿದರು.

    ಬಿ.ಜಿ.ಕೆರೆ ವಸುಂಧರ ಕೃಷಿ ಕ್ಷೇತ್ರದಲ್ಲಿ ಶನಿವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಮ್ಮಿಕೊಂಡಿದ್ದ ಕೆಸಿಸಿ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    15 ದಿನ, ತಿಂಗಳು, ಮೂರು ತಿಂಗಳು, ಆರು ತಿಂಗಳು, ವಾರ್ಷಿಕ ಬೆಳೆಗಳನ್ನು ಬೆಳೆದಾಗ ಮಾತ್ರ ರೈತರು ಕಷ್ಟದಿಂದ ಪಾರಾಗಬಹುದು. ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಶ್ರಮವಹಿಸಿ ದುಡಿಯುವ ಮೂಲಕ ಅದನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದರು.

    ಮುಖಂಡ ಕೆ.ಟಿ.ಶ್ರೀರಾಮರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಜನಪರ, ರೈತರಿಗಾಗಿ ಸಾಕಷ್ಟು ಯೋಜನೆ ರೂಪಿಸಿದೆ. ಫಸಲ್ ಬಿಮಾ, ಕೃಷಿ ಸಮ್ಮಾನ್, ಜೀವನ್ ಜ್ಯೋತಿ, ಜೀವನ್ ರಕ್ಷಾ ಯೋಜನೆ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ವ್ಯವಸ್ಥಾಪಕ ಬಿ.ಎಂ.ಮೌನೇಶ್ ಮಾತನಾಡಿ, ಈ ಬಾರಿ 125 ರೈತರಿಗೆ ಬೆಳೆ ಸಾಲವನ್ನು ಪುನರಾವರ್ತನೆ ಮಾಡಿಕೊಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 45 ಜನರಿಗೆ ಬೆಳೆ ಸಾಲ ವಿತರಿಸಲಾಗಿದೆ. ಪಡೆದ ಸಾಲವನ್ನು ಸದುದ್ದೇಶಕ್ಕೆ ಬಳಸಿ ಸಕಾಲಕ್ಕೆ ಹಿಂದಿರುಗಿಸಿದಾಗ ಬ್ಯಾಂಕುಗಳು ಮತ್ತೊಬ್ಬರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ ಎಂದರು.

    ರೈತ ಮಹಿಳೆ ಎಸ್.ವಿ.ಸುಮಂಗಲಮ್ಮ, ಪಿಡಿಒ ಗುರುರಾಜ್, ಶ್ರೀರಾಮರೆಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ಜಿ.ಮಂಜುನಾಥ್, ಎಂ.ಪಿ.ನಾಗರಾಜ್, ನಾಗೇಶ್, ಅನಂತರೆಡ್ಡಿ, ನಾಗರೆಡ್ಡಿ, ಲಕ್ಷ್ಮಣರೆಡ್ಡಿ, ಬಿ.ರಾಮಪ್ಪ, ರುದ್ರಮುನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts