More

    ಸರ್ಕಾರಿ ಶಾಲೆ ಉಳಿದರೆ ದೇಶ ಉಳಿದಿತು

    ಕೊಂಡ್ಲಹಳ್ಳಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಾಧಕರನ್ನಾಗಿಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಜಂಟಿ ಹೊಣೆ ಎಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.

    ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ದೇಶ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ತಿಳಿಸಿದರು.

    ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಮಾತನಾಡಿ, ಇಂಗ್ಲಿಷ್ ವ್ಯಾಮೋಹದಿಂದ ಪಾಲಕರು ಖಾಸಗಿ ಶಾಲೆಗಳತ್ತ ಹೊರಳುತ್ತಿರುವುದು ಬೇಸರದ ವಿಷಯ ಎಂದರು.

    ಡಿವೈಎಸ್‌ಪಿ ಇ.ಶಾಂತವೀರ್ ಮಾತನಾಡಿ, ದೇವರಿಗಿಂತಲೂ ಮಿಗಿಲಾದವರು ಗುರುಗಳು. ಸತತ ಪರಿಶ್ರಮದ ಸಾಧನೆಯಿಂದ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ ಎಂದು ತಿಳಿಸಿದರು.

    ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿದರು. ತಾಪಂ ಸದಸ್ಯ ಟಿ.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗರಾಜ್, ವನಮಿತ್ರ ಕಾತಿ ಮಾಸ್ತರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ತಾಪಂ ಸದಸ್ಯ ಇ.ರಾಮರೆಡ್ಡಿ, ರೇಷ್ಮೆ ವೀರೇಶ್, ಗ್ರಾಪಂ ಅಧ್ಯಕ್ಷೆ ಈರಕ್ಕ, ಡಯಟ್ ಪ್ರಾಚಾರ್ಯ ಪ್ರಕಾಶ್, ಬಿಇಒ ಎನ್.ಸೋಮಶೇಖರ್, ಜಿಂಕಾ ಶ್ರೀನಿವಾಸುಲು, ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಕೆ.ಗುರುಲಿಂಗಪ್ಪ, ನಿವೃತ್ತ ಶಿಕ್ಷಕರಾದ ಬಾಲಚಂದ್ರಪ್ಪ, ಪಿ.ಬಸವರಾಜಪ್ಪ, ಎಸ್.ರಾಮಣ್ಣ, ಎಸ್.ಟಿ.ಬ್ರಹ್ಮಾನಂದಪ್ಪ, ಪಿಡಿಒ ಪ್ರಹ್ಲಾದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts