More

    ಕೋಲಾರ ಕಾಂಗ್ರೆಸ್​ ಬಿಕ್ಕಟ್ಟು; ಮುನಿಯಪ್ಪ ಫ್ಯಾಮಿಲಿಗೆ ಟಿಕೆಟ್​ ಕೊಟ್ಟರೆ ರಾಜೀನಾಮೆ ನೀಡೋದಾಗಿ ‘ಕೈ’ ಶಾಸಕರ ಬೆದರಿಕೆ

    ಕೋಲಾರ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್​ ಪಕ್ಷಕ್ಕೆ ಒಂದಿಲ್ಲೊಂದು ಸಂಕಷ್ಟು ಎದುರಾಗುತ್ತಿದ್ದು, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್​ಗೆ ಕಗ್ಗಂಟ್ಟಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿನ ಬಣ ರಾಜಕೀಯ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿದರೂ ಬಂಡಾಯ ಶಮನವಾಗುವಂತೆ ಕಾಣುತ್ತಿಲ್ಲ.

    ಮಹತ್ವದ ಬೆಳವಣಿಗೆಯಲ್ಲಿ ಕೋಲಾರ ಲೋಕಸಭಾ ಟಿಕೆಟ್​ಅನ್ನು ಸಚಿವ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ನೀಡಿದ್ದಲ್ಲಿ ಜಿಲ್ಲೆಯ ಐವರು ಶಾಸಕರು ರಾಜೀನಾಮೆ ನೀಡುವುದಾಗಿ ಕೋಲಾರ ಕ್ಷೇತದ ಶಾಸಕ ಕೊತ್ತೂರು ಮಂಜುನಾಥ್​ ಬೆದರಿಕೆ ಹಾಕಿದ್ದಾರೆ.

    ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಮಂಜುನಾಥ್, ಸಚಿವ ಕೆ.ಹೆಚ್​.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡದಂತೆ ಕಾಂಗ್ರೆಸ್​ ಹೈಕಮಾಂಡ್​ಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಟಿಕೆಟ್​ ನೀಡಿದರೇ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್​​​ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್​​ ರಾಜೀನಾಮೆ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ.

    Muniyappa Son In Law

    ಇದನ್ನೂ ಓದಿ: ಎಎಪಿ ಪ್ರತಿಭಟನೆಯನ್ನು ಕವರ್​ ಮಾಡುತ್ತಿದ್ದ ಫೋಟೋ ಜರ್ನಲಿಸ್ಟ್​ಗಳ ಮೇಲೆ ಪೊಲೀಸರಿಂದ ಹಲ್ಲೆ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ನಮ್ಮ ಬಣಕ್ಕೆ ಟಿಕೆಟ್ ನೀಡುವಂತೆ ಮಾಡಿದ್ದೇವೆ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಮ್ದು. ಹೈಕಮಾಂಡ್​ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧವಾಗಿದ್ದೇವೆ. ನಾನು, ರಮೇಶ್​​ಕುಮಾರ್ ಸೇರಿ ಒಟ್ಟಿಗೆ ಕೆಲಸ ಮಾಡುವುದಾಗಿ ಹೇಳಿದ್ದೇವೆ.

    ಒಂದು ವೇಳೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್​ ನೀಡಿದ್ದಲ್ಲಿ 12 ಗಂಟೆಗೆ ಸುಮಾರಿಗೆ ಸಭಾಪತಿಗೆ ಕಚೇರಿಗೆ ಭೇಟಿ ನೀಡಿ, ರಾಜಿನಾಮೆ ಪತ್ರ ನೀಡುತ್ತೇವೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಪ್ರಯಾಣ ಮಾಡುತ್ತೇವೆ. ಸಂಜೆ ನಾಲ್ಕು ಗಂಟೆಗೆ ಸಭಾಪತಿಗಳನ್ನು ಭೇಟಿ ಮಾಡಲಿದ್ದೇವೆ ಎಂದು ಶಾಸಕ ಮಂಜುನಾಥ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts