More

    ಕುರಿ ಹಾಗೂ ಕೋಳಿ ಸಾಕಾಣಿಕೆಯತ್ತ ಯುವಕರು

    ಶ್ರೀನಿವಾಸಪುರ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡ ಅನೇಕ ಯುವಕರು ಗ್ರಾಮಗಳತ್ತ ಮುಖವಾಡಿ ವ್ಯವಸಾಯ ಸೇರಿ ಕುರಿ ಹಾಗೂ ಕೋಳಿ ಸಾಕಾಣಿಕೆಯ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಾಂಸದ ಬೇಡಿಕೆ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಅನೇಕ ರೈತರು ತೋಟಗಳಲ್ಲಿ ಫಾರ್ಮ್ ಹೌಸ್‌ಗಳನ್ನು ನಿರ್ವಾಣ ವಾಡಿಕೊಂಡು ಕುರಿ ಮತ್ತು ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಕುರಿ ವಾಂಸ ಕೆ.ಜಿ.ಗೆ 600ರಿಂದ 650 ರೂ.ಗಳ ತನಕ ವಾರಾಟವಾಯಿತು. ನಾಟಿಕೊಳಿಯೂ 450 ರಿಂದ 500 ರೂ.ಗಳ ತನಕ ವಾರಾಟವಾಯಿತು. ಹಾಗಾಗಿ ಕೆಲವರು ಹೈಟೆಕ್ ಕುರಿ ಹಾಗೂ ಕೋಳಿ ಫಾರ್ಮ್‌ಗಳನ್ನು ನಿರ್ವಾಣ ವಾಡಿಕೊಂಡರೆ ಇನ್ನು ಕೆಲವರು ಶೆಡ್‌ಗಳಲ್ಲಿಯೇ ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ.

    ಗ್ರಾಮಗಳಲ್ಲಿ ಸಣ್ಣ ರೈತರು ಮೊದಲಿನಿಂದಲೂ ಕುರಿ ಮೇಯಿಸುತ್ತಿದ್ದರು. ಈಗ ಯುವಕರು ಕುರಿ ಮೇಯಿಸಲು ಮುಂದಾಗಿರುವುದರಿಂದ ಕುರಿ ಮೇಯಿಸುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪೂರ್ಣವಾಗಿ ಹೋಟೆಲ್‌ಗಳು ತೆರಯದೆ, ಸಭೆ ಸವಾರಂಭಗಳು ನಡೆಯದ ಕಾರಣ ನಾಟಿಕೋಳಿ ಮತ್ತು ಕುರಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಕಳೆದ 15 ದಿನಗಳಿಂದ ವಾಂಸದ ಬೆಲೆ ಹೆಚ್ಚಾಗಿದೆ.

    ಅವಾವಾಸ್ಯೆ ಕಳೆದರೆ ಶ್ರಾವಣ ಪ್ರಾರಂಭವಾಗುತ್ತದೆ. ಒಂದು ವಾರ ವಾತ್ರ ವಾಂಸಕ್ಕೆ ಬೇಡಿಕೆ ಇರುತ್ತದೆ. ನಂತರ ಗಣೇಶ ಹಬ್ಬದ ಹೊಸತೊಡಕು ನಂತರ ಮತ್ತೆ ವಾಂಸ ತಿನ್ನುವರರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿಯ ತನಕ ಕೋಳಿ ಮತ್ತು ಕುರಿ ಸಾಕಾಣಿಕೆ ವಾಡಿದವರು ವಾರಾಟ ವಾಡಲು ಕಾಯಬೇಕಾಗುತ್ತದೆ.

    ಫಾರ್ಮ್ ಕೋಳಿ ಮರಿ ಅಲ್ಪಾವಧಿಯಲ್ಲಿ ದೊಡ್ಡದಾಗುತ್ತದೆ. ನಾಟಿ ಕೋಳಿ ದೊಡ್ಡದಾಗಬೇಕಾದರೆ ಹೆಚ್ಚಿನ ಸಮಯ ಬೇಕು ಹಾಗೂ ಫೀಡ್ ಸಹ ಹೆಚ್ಚಾಗಿ ಕೊಡಬೇಕಾಗುತ್ತದೆ. ಕೆಜಿಗೆ 350-400 ರೂ.ಗಳ ತನಕ ವಾರಾಟವಾದರೆ ಇದರಲ್ಲಿ ಲಾಭಾಂಶ ಸಿಗುತ್ತದೆ. ನಾಟಿ ಕೋಳಿ ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಹೆಚ್ಚಾಗಿ ಾರ್ಮ್ ಕೋಳಿ ಖರೀದಿಸುತ್ತಿದ್ದಾರೆ.
    ಮುರಳೀಧರ, ಕೋಳಿ ಸಾಕಾಣಿಕೆದಾರ, ಹೊಗಳಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts