More

    ಬ್ರಾಹ್ಮಣರ ಅಭಿವೃದ್ಧಿ ಮಂಡಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿದರೆ ನೆರವು

    ಕೋಲಾರ: ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತು ಒದಗಿಸಲು ಅವಕಾಶವಿದೆ. ವಿದ್ಯಾರ್ಥಿಗಳು, ಆರ್ಚಕರು ತಾಲೂಕು ಕಚೇರಿಯಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದು ಮಂಡಳಿಗೆ ಸಲ್ಲಿಸಿದಲ್ಲಿ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಮಂಡಳಿಯ ನಿರ್ದೇಶಕ ವತ್ಸಲ ನಾಗೇಶ್ ಹೇಳಿದರು.

    ನಗರದ ಗಾಯಿತ್ರಿ ಮಂದಿರದಲ್ಲಿ ಭಾನುವಾರ ಬ್ರಾಹ್ಮಣ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜಿನರಾಗಿರುವ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಬ್ರಾಹ್ಮಣರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿರುವ ಸಚ್ಚಿದಾನಂದಮೂರ್ತಿ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಬಡ ಬ್ರಾಹ್ಮಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ನೀಡಲು ಕಾರ್ಯಕ್ರಮ ರೂಪಿಸಿದ್ದಾರಲ್ಲದೆ, ಚಾಣುಕ್ಯ ಯೋಜನೆಯಡಿ ಐಎಎಸ್ ಮಾಡಲು ಇಚ್ಛಿಸಿರುವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.

    150 ಹೆಚ್ಚು ವಿದ್ಯಾರ್ಥಿಗಳಿಗೆ ಪರಿಣಿತರಿಂದ ಉಚಿತವಾಗಿ ತರೆಬೇತಿ ನೀಡಲಾಗುತ್ತಿದೆ. ಈ ಪೈಕಿ ಕನಿಷ್ಠ 5 ಮಂದಿ ಐಎಎಸ್ ಅಧಿಕಾರಿಗಳಾದರೆ. ಅದಕ್ಕಿಂತ ದೊಡ್ಡ ಸಾಧನೆ, ಸಂತೋಷ ಮತ್ತೊಂದಿಲ್ಲ, ಬ್ರಾಹ್ಮಣರಿಗೆ ಮಂಡಳಿಯಿಂದ ಸಿಗಬಹುದಾದ ಸವಲತ್ತುಗಳ ಕುರಿತ ಮಾಹಿತಿಯನ್ನು ಮುಂದಿನ ವಾರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನೆರವು ಪಡೆಬಹುದು ಎಂದರು.

    ಸಾಧನೆ ಸುಲಭವಲ್ಲ, ಅದಕ್ಕೆ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಶ್ರದ್ಧೆ ಅವಶ್ಯಕ, ವಿದ್ಯಾರ್ಥಿಗಳು ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ತಂದೆ-ತಾಯಿ, ಗುರು ಹಿರಿಯರ ಆಶಯಗಳನ್ನು ಹುಸಿಗೊಳಿಸದೆ ಉತ್ತಮ ವ್ತಕ್ತಿತ್ವದ ಜತೆಗೆ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಕೆಜಿಎಫ್‌ನ ಮಹಾವೀರ ಜೈನ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಡಿ.ಎಸ್.ಶ್ರೀನಿವಾಸಪ್ರಸಾದ್ ಮಾತನಾಡಿ, ಸಾಧನೆಯನ್ನು ಜಾತಿ, ಮತ, ಪ್ರಾದೇಶಿಕತೆಯಿಂದ ಪರಿಗಣಿಸಬಾರದು. ವ್ಯಕ್ತಿಯ ಬಾಹ್ಯ ಶಕ್ತಿಯನ್ನು ನೋಡಿ ಅರ್ಹತೆ ಅಳೆಯುವುದಕ್ಕಿಂತ ವ್ಯಕ್ತಿಯಲ್ಲಿನ ಅಂತರಂಗದ ಶಕ್ತಿ ಗುರುತಿಸಿ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಕೃಷ್ಣಮೂರ್ತಿ, ಜಯಶ್ರೀ, ಪಾ.ಶ್ರೀ.ಅನಂತರಾಮ್, ಡಾ.ಡಿ.ಎಸ್. ಶ್ರೀನಿವಾಸಪ್ರಸಾದ್ ಹಾಗೂ ಸಮಾಜ ಸೇವಕ ಸೈಕಲ್ ಸೀನಪ್ಪ, ಹಿರಿಯ ವಕೀಲರಾದ ರಾಮಚಂದ್ರಯ್ಯ, ಜಯತೀರ್ಥಚಾರ್, ಹಾಬಿ ರಮೇಶ್, ಯುವ ವಕೀಲ ನಾಗೇಂದ್ರ, ಶೈಕ್ಷಣಿಕ ಸಾಧಕಿ ಕಮಲಾಕ್ಷಿ, ಕೂಡಾ ನಿರ್ದೇಶಕ ಸತ್ಯನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು.

    ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಹೆಚ್ಚು ಅಂಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು.

    ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ವಾಸುದೇವಮೂರ್ತಿ, ಉಪಾಧ್ಯಕ್ಷರಾದ ಎನ್.ಎ.ಅಚ್ಯುತ, ಉದಯಕುಮಾರ್, ಕಾರ್ಯದರ್ಶಿ ಬಿ.ಎಸ್.ರಾಮಕೃಷ್ಣ, ಚಿನ್ಮಯ ವಿದ್ಯಾಲಯದ ಸಂಗೀತ ಶಿಕ್ಷಕಿ ಭಾವನಿ ಶ್ರೀೀನಿವಾಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts