More

    80 ವರ್ಷದ ಅಜ್ಜಿಗೆ ರಸ್ತೆಯೇ ಮನೆ

    ಮುಳಬಾಗಿಲು: ಹಲವು ವರ್ಷಗಳಿಂದ ರಸ್ತೆ ಬದಿಯಲ್ಲೇ ವಾಸಿಸುತ್ತಿರುವ 80 ವರ್ಷದ ವೃದ್ಧೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದು, ತಾಲೂಕು ಆಡಳಿತ ಆರೈಕೆಗೆ ವ್ಯವಸ್ಥೆ ಮಾಡಬೇಕಿದೆ.

    ಕೆಜಿಎಫ್‌ನವರಾದ ಶಿವನಾಗಮ್ಮ ಸಂಬಂಧಿಕರು ಯೋಗಕ್ಷೇಮ ನೋಡದ ಕಾರಣ ಮಳೆ, ಚಳಿ, ಬಿಸಿಲಲ್ಲೇ ಬದುಕು ಸಾಗಿಸುತ್ತಿದ್ದು, ಬದುಕು ಅನಾಥವಾಗಿದೆ.

    ಮುಳಬಾಗಿಲು ನಗರದ ಬಜಾರು ರಸ್ತೆಯ ಶ್ರೀನಿವಾಸಪುರ ವೃತ್ತದ ಜಹಂಗೀರ್ ಮೊಹಲ್ಲಾ ಮಸೀದಿ ಬಳಿ 3-4 ವರ್ಷಗಳಿಂದ ವಾಸವಿದ್ದು, ರಸ್ತೆಯೇ ಇವರ ಮನೆಯಾಗಿದೆ.

    ಪಾದಚಾರಿಗಳು, ಸುತ್ತಮುತ್ತಲಿನವರು ಹಳೇ ಸೀರೆ, ಹೊದಿಕೆ ನೀಡುತ್ತಿದ್ದಾರೆ. ಆದರೆ ಇವರಿಗೆ ಆರೋಗ್ಯ ಸೇವೆ ಇಲ್ಲವಾಗಿದೆ. ಕರೊನಾ ಆರ್ಭಟ ಹೆಚ್ಚಾಗಿದ್ದರೂ ಅಜ್ಜಿ ಸ್ಥಿತಿ ಮಾತ್ರ ಬೀದಿಯಲ್ಲೇ ಕಳೆಯುವಂತಾಗಿದೆ.

    ಹಿರಿಯ ನಾಗರಿಕರ ಸೇವೆಗೆ ಸರ್ಕಾರ ಎನ್‌ಜಿಒಗಳನ್ನು ನೇಮಿಸಿದೆ. ಈ ಬಗ್ಗೆ ಕ್ರಮ ಕೈಗೊಂಡು ವೃದ್ಧೆಗೆ ಆರೋಗ್ಯ ಸೇವೆ ಕಲ್ಪಿಸಲಾಗುವುದು.
    ಬಿ.ಎಂ.ಮುನಿರಾಜು, ಹಿರಿಯ ನಾಗರಿಕರ ಮತ್ತು ಅಂಗವಿಕಲರ ಚೇತನ ಕಲ್ಯಾಣ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts