ಐಪಿಎಲ್​ನಲ್ಲಿ 12 ಲಕ್ಷದಿಂದ 21 ಕೋಟಿ ರೂ.ಗೆ ಬೆಳೆದಿದೆ ಕೊಹ್ಲಿ ಸಂಭಾವನೆ! ವಿಶೇಷ ಕ್ಲಬ್​ಗೆ ಸೇರ್ಪಡೆ...

web kohli 20
Published on

ಬೆಂಗಳೂರು: ವಿರಾಟ್​ ಕೊಹ್ಲಿ 2008ರಲ್ಲಿ ಯುವ ಆಟಗಾರನಾಗಿ ಆರ್​ಸಿಬಿ ತಂಡಕ್ಕೆ ಸೇರ್ಪಡೆಗೊಂಡಾಗ ಅವರ ಸಂಭಾವನೆ 12 ಲಕ್ಷ ರೂ. ಆಗಿತ್ತು. 19 ವಯೋಮಿತಿ ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರನ್ನು ಆಗ ಡ್ರ್ಟ್​ಾ ಪ್ರಕ್ರಿಯೆ ಮೂಲಕ ಐಪಿಎಲ್​ ತಂಡಗಳಿಗೆ ಸೇರಿಸಲಾಗಿತ್ತು. ಅದರನ್ವಯ ಕೊಹ್ಲಿ ಆಗಿನ ಮೂಲಬೆಲೆಗೆ ಆರ್​ಸಿಬಿ ತಂಡ ಸೇರಿದ್ದರು. ನಂತರ 2011ರಲ್ಲಿ ಅವರನ್ನು ಆರ್​ಸಿಬಿ 8.28 ಕೋಟಿ ರೂ.ಗೆ ರಿಟೇನ್​ ಮಾಡಿಕೊಂಡಿತ್ತು. 2014ರಲ್ಲಿ ಮತ್ತೆ 12.5 ಕೋಟಿ ರೂ, 2018ರಲ್ಲಿ 17 ಕೋಟಿ ರೂ.ಗೆ ರಿಟೇನ್​ ಮಾಡಿಕೊಳ್ಳಲಾಗಿತ್ತು. 2022ರಲ್ಲಿ ನಾಯಕತ್ವ ತ್ಯಜಿಸಿದ್ದ ಕಾರಣ ಅವರ ರಿಟೇನ್​ ಮೊತ್ತ 15 ಕೋಟಿ ರೂ.ಗೆ ಇಳಿದಿತ್ತು. ಈ ಬಾರಿ ಮತ್ತೆ ಅವರ ರಿಟೇನ್​ ಮೊತ್ತ 21 ಕೋಟಿ ರೂ.ಗೆ ಏರಿದೆ. ಅವರು ಒಮ್ಮೆಯೂ ಹರಾಜಿಗೆ ಹೋಗದೆ ಐಪಿಎಲ್​ನ ಎಲ್ಲ ಆವೃತ್ತಿಗಳಲ್ಲಿ ಆಡಿದ ಏಕಮಾತ್ರ ಆಟಗಾರರೆನಿಸಿದ್ದಾರೆ.

ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ 20 ಕೋಟಿ ರೂ.ಗಿಂತ ಅಧಿಕ ಸಂಭಾವನೆ ಪಡೆಯುತ್ತಿರುವ ಮೊದಲ ಭಾರತೀಯರಾಗಿದ್ದಾರೆ. ಈ ಮೂಲಕ ಅವರು ಐಪಿಎಲ್​ನಲ್ಲಿ 20 ಕೋಟಿ ರೂ.ಗಿಂತ ಅಧಿಕ ಸಂಭಾವನೆ ಪಡೆಯುವ ಆಟಗಾರರ ವಿಶೇಷ ಕ್ಲಬ್​ಗೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಸ್ಟ್ರೆಲಿಯಾದ ಪ್ಯಾಟ್​ ಕಮ್ಮಿನ್ಸ್​ ಸನ್​ರೈಸರ್ಸ್​ ಪರ 20.50 ಕೋಟಿ ರೂ. ಮತ್ತು ಮಿಚೆಲ್​ ಸ್ಟಾರ್ಕ್​ ಕೆಕೆಆರ್​ ಪರ 24.75 ಕೋಟಿ ರೂ.ಗೆ ಆಡಿದ್ದರು. ಈ ಬಾರಿ ಕೊಹ್ಲಿ ಜತೆಗೆ ದಣ ಆಫ್ರಿಕಾದ ಹೆನ್ರಿಕ್​ ಕ್ಲಾಸೆನ್​ ಮತ್ತು ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್​ ಕೂಡ ಈ ಕ್ಲಬ್​ಗೆ ಸೇರ್ಪಡೆಯಾಗಿದ್ದಾರೆ. ಕ್ಲಾಸೆನ್​ 23 ಕೋಟಿ ರೂ.ಗೆ ಸನ್​ರೈಸರ್ಸ್​ ಮತ್ತು ಪೂರನ್​ 21 ಕೋಟಿ ರೂ.ಗೆ ಲಖನೌ ಸೂಪರ್​ಜೈಂಟ್ಸ್​ ಪರ ರಿಟೇನ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net