More

    ಈ ಸಲ ಕಪ್ ಗೆಲ್ಲದಿದ್ದರೆ ಆರ್‌ಸಿಬಿ ಸಾರಥ್ಯಕ್ಕೂ ವಿರಾಟ್ ವಿದಾಯ?

    ಬೆಂಗಳೂರು: ಮುಂಬರುವ ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸಲು ವಿರಾಟ್ ಕೊಹ್ಲಿ ನಿರ್ಧರಿಸುವ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹರಿದಾಡುತ್ತಿದೆ. ಅದು, ಈ ಸಲ ಆರ್‌ಸಿಬಿ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಲವಾಗದಿದ್ದರೆ ಅದರ ನಾಯಕತ್ವವನ್ನೂ ಕೊಹ್ಲಿ ತ್ಯಜಿಸಲಿದ್ದಾರೆ ಎನ್ನುವುದಾಗಿದೆ!

    ಮೊದಲ ಆವೃತ್ತಿಯಿಂದಲೂ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್ ಕೊಹ್ಲಿ, 2013ರಲ್ಲಿ ತಂಡದ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ ರನ್ ಪ್ರವಾಹ ಹರಿಸುತ್ತಿದ್ದರೂ, ನಾಯಕರಾಗಿ ಅವರ ಗೆಲುವಿನ ಪ್ರಮಾಣ ಶೇ. 48.04 ಮಾತ್ರ ಇದೆ. ಅವರ ಸಾರಥ್ಯದ ಕಳೆದ 8 ಆವೃತ್ತಿಗಳಲ್ಲೂ ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲಲು ವಿಲವಾಗಿದ್ದು, 3 ಬಾರಿಯಷ್ಟೇ ಪ್ಲೇಆ್ಗೇರಿತ್ತು. 2016ರಲ್ಲಿ ರನ್ನರ್‌ಅಪ್ ಆಗಿದ್ದೇ ತಂಡದ ಶ್ರೇಷ್ಠ ಸಾಧನೆಯಾಗಿದೆ.

    ಕೊಹ್ಲಿ ನಾಯಕತ್ವಕ್ಕೆ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ನಿಂದ ಇದುವರೆಗೆ ಯಾವುದೇ ಒತ್ತಡ ಎದುರಾಗಿಲ್ಲ. ಆದರೆ ಈ ಸಲವೂ ಕಪ್ ಗೆಲ್ಲಲು ಸಾಧ್ಯವಾಗದಿದ್ದರೆ, ಆಗ ಕೊಹ್ಲಿ ನಾಯಕತ್ವದಲ್ಲಿ ಮುಂದುವರಿಯಲು ಹಿಂದೇಟು ಹಾಕಬಹುದು ಎನ್ನಲಾಗಿದೆ. ಮುಂದಿನ ವರ್ಷದ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿರುವುದರಿಂದ ಕೊಹ್ಲಿ ತಂಡದ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಎಬಿ ಡಿವಿಲಿಯರ್ಸ್‌ ಮುಂದಿನ ನಾಯಕರಾಗುವ ಸಾಧ್ಯತೆಯೂ ಹೆಚ್ಚಿದೆ.

    ಕೊಹ್ಲಿ ಸಾರಥ್ಯದಲ್ಲಿ ಆರ್‌ಸಿಬಿ
    ಪಂದ್ಯ: 132
    ಜಯ: 60
    ಸೋಲು: 65
    ಟೈ: 3
    ರದ್ದು: 4

    ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ತ್ರಿಕೋನ ಸ್ಪರ್ಧೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts