More

    ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು, ಅತಿವೇಗದ 23 ಸಾವಿರ ರನ್ ಸಾಧನೆ

    ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 23 ಸಾವಿರ ರನ್ ಪೂರೈಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಆಂಡರ್‌ಸನ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಒಟ್ಟಾರೆಯಾಗಿ ಅವರು ಈ ಸಾಧನೆ ಮಾಡಿದ ವಿಶ್ವದ 7ನೇ ಹಾಗೂ ಭಾರತದ 3ನೇ ಬ್ಯಾಟ್ಸ್‌ಮನ್ ಎನಿಸಿದರು.

    32 ವರ್ಷದ ಕೊಹ್ಲಿ 490 ಇನಿಂಗ್ಸ್‌ಗಳಲ್ಲಿ ಈಗ 23,049 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ 500ಕ್ಕಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ 23 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಕೊಹ್ಲಿ 96 ಟೆಸ್ಟ್‌ಗಳಲ್ಲಿ 7,721 ರನ್, 254 ಏಕದಿನಗಳಲ್ಲಿ 12,169 ರನ್ ಮತ್ತು 90 ಟಿ20 ಪಂದ್ಯಗಳಲ್ಲಿ 3,159 ರನ್ ಗಳಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (34,357) 522 ಇನಿಂಗ್ಸ್‌ಗಳಲ್ಲಿ 23 ಸಾವಿರ ರನ್ ಪೂರೈಸಿದ್ದು ಹಿಂದಿನ ಅತಿವೇಗದ ಸಾಧನೆ.

    ರಾಹುಲ್ ದ್ರಾವಿಡ್ (24,208) ಈ ಪಟ್ಟಿಯಲ್ಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ. ಕುಮಾರ ಸಂಗಕ್ಕರ (28,016), ರಿಕಿ ಪಾಂಟಿಂಗ್ (27,483), ಮಹೇಲ ಜಯವರ್ಧನೆ (25,957), ಜಾಕ್ಸ್ ಕಾಲಿಸ್ (25,534) ಈ ಸಾಧನೆ ಮಾಡಿರುವ ಇತರರು.

    ಬದಲಾಗಲಿದೆ ಐಪಿಎಲ್ ಸ್ವರೂಪ! ಹೇಗಿರಲಿದೆ 2022ರ ಟೂರ್ನಿ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts