More

    ಭೂಕುಸಿತ ಸಂತ್ರಸ್ತರಿಗೆ ಸೌಕರ್ಯ ಒದಗಿಸಿ

    *ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಎಸಿಗೆ ಮನವಿ ಸಲ್ಲಿಕೆ

    ಮಡಿಕೇರಿ: 2018ರಲ್ಲಿ ಭೂಕುಸಿತದಿಂದ ತೊಂದರೆಗೆ ಒಳಗಾದ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮಸ್ಥರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
    ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಕುಂಬಾರಗಡಿಗೆಯ ಮೈದಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಗಣೇಶ್, 2018ರ ಭೂಕುಸಿತದಿಂದ ಈ ಭಾಗದ ರೈತರ ಮನೆಗಳು ಹಾಗೂ ಭೂಮಿ, ಗದ್ದೆಗಳು ಹಾಳಾಗಿವೆ. ರಸ್ತೆ ಸಂಪರ್ಕವಿಲ್ಲದ ಜನರು ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿಗೆ ನಡೆದುಕೊಂಡೇ ಬರಬೇಕಿದೆ ಎಂದರು.
    ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಈ ಗ್ರಾಮದಲ್ಲಿ ಬಹುತೇಕ ವೃದ್ಧರು ವಾಸಿಸುತ್ತಿದ್ದು ಮೂಲ ಸೌಕರ್ಯವಿಲ್ಲದೆ ವರ್ಷಗಳೇ ಉರುಳಿವೆ. ಕುಡಿಯುವ ನೀರು, ವಿದ್ಯುತ್, ರಸ್ತೆ, ಮನೆ ದುರಸ್ತಿ, ನೂತನ ಮನೆ ನಿರ್ಮಾಣ ಸೇರಿ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
    ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದ್ದು ಇನ್ನುಳಿದ ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.


    ಸೋಮವಾರಪೇಟೆ ತಾಲೂಕು ಎಸಿಎಫ್ ನೆಹರೂ, ಸೋಮವಾರಪೇಟೆ ತಾಲೂಕು ಕೃಷಿ ಅಧಿಕಾರಿ ಮನಸ್ವಿ, ರೈತ ಮುಖಂಡರಾದ ಬಾಚಮಾಡ ಭವಿಕುಮಾರ್, ಆಲೇಮಾಡ ಮಂಜುನಾಥ್, ಚೆಪ್ಪುಡೀರ ರೋಷನ್, ರಾಜೇಶ್, ಪೆಮ್ಮಂಡ ಅಯ್ಯಪ್ಪ, ಚೊಟ್ಟೆಕಾಳಪಂಡ ಮನು, ಗಾಣಂಗಡ ಉತ್ತಯ್ಯ ಇತರರು ಹಾಜರಿದ್ದರು.

    ಬೇಡಿಕೆಗಳು: ವಿದ್ಯುತ್, ದೂರವಾಣಿ ಸಂಪರ್ಕ, ಮೊಬೈಲ್ ಟವರ್ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ದಾದಿಯರ ನೇಮಕ, ಅಂಗನವಾಡಿ ದುರಸ್ತಿ, ಸಮುದಾಯ ಭವನ ನಿರ್ಮಾಣ, ಪಶು ವೈದ್ಯಕೀಯ ಕೇಂದ್ರ ಸ್ಥಾಪನೆ, ಸಂಚಾರಿ ಪಶು ಆಸ್ಪತ್ರೆ, ಪ್ರತಿ ಪಡಿತರ ಚೀಟಿದಾರರಿಗೆ ತಿಗಳಿಗೆ 5 ಲೀಟರ್ ಸೀಮೆ ಎಣ್ಣೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts