More

  ಮುತ್ತೂಟ್​ ಫೈನಾನ್ಸ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಕೊಚ್ಚಿಯಲ್ಲಿ ಕಾರ್ಮಿಕ ಸಂಘಟನೆಯಿಂದ ದಾಳಿ

  ಕೊಚ್ಚಿ: ದಕ್ಷಿಣ ಭಾರತದ ಹೆಸರಾಂತ ಮುತ್ತೂಟ್​ ಫೈನಾನ್ಸ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್​ ಅಲೆಕ್ಸಾಂಡರ್​ ಮುತ್ತೂಟ್​ ಅವರ ಮೇಲೆ ಕಾರ್ಮಿಕ ಸಂಘಟನೆಯ ಕಾರ್ಯಕರ್ತರ ಗುಂಪು ದಾಳಿ ನಡೆಸಿದೆ.

  ಕೊಚ್ಚಿಯಲ್ಲಿರುವ ಕಚೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಜಾರ್ಜ್​ ಅವರ ಕಾರನ್ನು ಅಡ್ಡಗಟ್ಟಿದ ತಂಡ, ಕಲ್ಲು ತೂರಾಟ ನಡೆಸಿದೆ. ಕಲ್ಲು ತೂರಾಟದಿಂದ ಜಾರ್ಜ್​ ಅವರ ತಲೆ ಹಾಗೂ ಭುಜಕ್ಕೆ ಗಾಯಗಳಾಗಿವೆ. ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮುತ್ತೂಟ್​ ಕಂಪನಿಯ ಎಂಡಿ ಮೇಲೆ ಸಿಐಟಿಯು ಗೂಂಡಾಗಳು ಕಲ್ಲು ತೂರಿದ್ದಾರೆ. ಇದು ಯೋಜಿತ ದಾಳಿಯಾಗಿದೆ. ದೇವರ ಅನುಗ್ರಹದಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸಿಐಟಿಯು ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬುದಕ್ಕೆ ದಾಖಲೆಗಳು ಇವೆ ಎಂದು ಕಂಪನಿಯ ಪಿಆರ್​ಒ ಬಾನು ಜಾನ್​ ಹೇಳಿದ್ದಾರೆ.

  ಕಂಪನಿಯ ಕೇರಳ ರಾಜ್ಯದಲ್ಲಿರುವ 43 ಶಾಖೆಗಳನ್ನು ನಷ್ಟದ ಹಿನ್ನೆಲೆಯಲ್ಲಿ ಮುಚ್ಚಲು ಇತ್ತೀಚೆಗೆ ನಿರ್ಧರಿಸಿ ಪ್ರಕಟಿಸಿತ್ತು. ಇದರಿಂದ 160 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಶಾಖೆಗಳನ್ನು ಮುಚ್ಚದಂತೆ ಉದ್ಯೋಗಿಗಳು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
  ಹಿಂದೆ ನಡೆದ ಮುಷ್ಕರದಲ್ಲಿ ಕಾರ್ಮಿಕರು ಪಾಲ್ಗೊಂಡಿದ್ದರಿಂದ ಅವರನ್ನು ಶಿಕ್ಷಿಸಲು ಕೆಲಸದಿಂದ ತೆಗೆಯಲಾಗಿದೆ ಎಂದು ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts