More

    ಪುರಾಣ ಶ್ರವಣದಿಂದ ಅಂಧಕಾರ ನಾಶ

    ಕೊಡೇಕಲ್: ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್ ಶಕ್ತಿಯೇ ದೇವಿಯಾಗಿದ್ದಾಳೆ ಎಂದು ಕೊಡೇಕಲ್‌ನ ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

    ನವರಾತ್ರಿ ಉತ್ಸವ ನಿಮಿತ್ತ ಗ್ರಾಮದ ದ್ಯಾಮಮ್ಮ ದೇವಸ್ಥಾನದಲ್ಲಿ ಭಾನುವಾರದಿಂದ ಆರಂಭವಾದ ದೇವಿ ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಾಣ ಎಂದರೆ ದೇಹದ ಪುರಾಣವಿದ್ದಂತೆ. ದೇಹದಲ್ಲಿರುವ ಅವಗುಣಗಳನ್ನು ಕಳೆಯುವುದೇ ರಾಕ್ಷಸ ಸಂಹಾರವಿದ್ದಂತೆ. ಪುರಾಣ ಶ್ರವಣದಿಂದ ಅಂಧಕಾರ ನಾಶವಾಗುತ್ತದೆ ಎಂದು ಹೇಳಿದರು.

    ನಮ್ಮದು ಸನಾತನ ಸಂಸ್ಕೃತಿ ಹೊಂದಿರುವ ರಾಷ್ಟ್ರ, ದೇಶದಲ್ಲಿ ಆಚರಿಸುವ ಪ್ರತಿ ಹಬ್ಬಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಅದರಲ್ಲೂ ನವರಾತ್ರಿ ವಿಶೇಷವಾಗಿದೆ. ಗ್ರಾಮದಲ್ಲಿ ೨೫ ವರ್ಷಗಳಿಂದ ನವರಾತ್ರಿ ವೇಳೆ ದೇವಿ ಪುರಾಣ ಆಯೋಜಿಸಿ ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸುತ್ತಿರುವ ಗ್ರಾಮಸ್ಥರ ಕರ‍್ಯ ಶ್ಲಾಘನೀಯ ಎಂದರು.

    ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಗದುಗಿನ ಶ್ರೀ ಪುಟ್ಟರಾಜ ಶಾಸ್ತ್ರಿ ಪುರಾಣ ಪಠಣ ಮಾಡಿದರು. ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್, ರಾಣಿ ರಂಗಮ್ಮ ಜಹಾಗೀರದಾರ್, ಕಾಶೀಬಾಯಿ ಮಾಲಿ ಪಾಟೀಲ್, ರಂಗನಾಥ ದೋರಿ, ಸೋಮಲಿಂಗಪ್ಪ ದೋರಿ, ಬಸಲಿಂಗಯ್ಯ ಮಠ, ಕೆ.ವಿ.ಜೋಶಿ, ಬಸನಗೌಡ ಮಾಲಿಗೌಡ್ರ, ಬಸವರಾಜ ಅಂಗಡಿ, ಬಸಣ್ಣ ಕಂಚಗಾರ, ನಿಂಗಣ್ಣ ಪತ್ತಾರ, ಬೊಮ್ಮಣ್ಣ ಪತ್ತಾರ, ಮೋಹನ ಪಾಟೀಲ್, ಬಸಣ್ಣ ಹಳೇಪೂಜಾರಿ, ನಿಜಲಿಂಗಪ್ಪ ಬಡಿಗೇರ, ಮಲ್ಲಣ್ಣ ಹೂಗಾರ, ವಿಶಾಲ ಅಂಗಡಿ ಇತರರಿದ್ದರು.

    ಬಸವರಾಜ ಅಂಗಡಿ ಸ್ವಾಗತಿಸಿದರು. ಚನ್ನಪ್ಪ ಹೂಗಾರ ವಂದಿಸಿದರು. ಶಾಮಸುಂದರ ಜೋಶಿ ನಿರೂಪಣೆ ಮಾಡಿದರು. ದೇವರಾಜ ಮತ್ತು ನಾಗರಾಜ ಹೂಗಾರ ಸಂಗೀತ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts