More

    ಕನ್ನಡಿಗ ಕೆ.ಎಲ್​. ರಾಹುಲ್​ ಐಪಿಎಲ್-2020ಯ​ ಮೊದಲ ಶತಕದ ಹಿಂದಿದೆ ಕೊಹ್ಲಿಯ ಕಾಣಿಕೆ..!

    ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ 6ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ನಾಯಕ ಕೆ.ಎಲ್​. ರಾಹುಲ್​ 132 ರನ್​ಗಳ ಭರ್ಜರಿ ಶತಕ ಸಿಡಿಸಿದ್ದಾರೆ. ಪ್ರಸಕ್ತ ಐಪಿಎಲ್ ಆವೃತ್ತಿಯ​​ ಮೊದಲ ಶತಕವಾಗಿದ್ದು, ರಾಹುಲ್​ಗೆ ಎರಡನೇ ಶತಕವಾಗಿದೆ.

    ಕೇವಲ 62 ಎಸೆತಗಳಲ್ಲಿ 7 ಸಿಕ್ಸರ್​, 14 ಬೌಂಡರಿ ನೆರವಿನೊಂದಿಗೆ ರಾಹುಲ್ ಸಿಡಿಸಿದ ಭರ್ಜರಿ ಶತಕದ ಶ್ರಮದ ಹಿಂದೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿಯ ಕಾಣಿಕೆಯು ಇದೆ ಎಂಬುದನ್ನು ಮರೆಯಬಾರದು.

    ರಾಹುಲ್​ ಬಾರಿಸಿದ ಚೆಂಡನ್ನು​ ಎರಡು ಬಾರಿ ಕೈಚೆಲ್ಲುವ ಮೂಲಕ ಅಮೂಲ್ಯ ಜೀವದಾನ ನೀಡಿದ್ದು, ರಾಹುಲ್​ ಶತಕಕ್ಕೆ ಬುನಾದಿ ಹಾಕಿಕೊಟ್ಟಂತಾಯಿತು. ಹೀಗಾಗಿ ಶತಕ ಸಿಡಿಸಿ ರಾಹುಲ್​ ಅಜೇಯರಾಗಿಯು ಉಳಿದರು.

    ಇದನ್ನೂ ಓದಿ: ಯುವಕನನ್ನು ಅಪಹರಿಸಿದ್ದ ಕಳ್ಳಕೃಷ್ಣನಿಗೆ ಗುಂಡೇಟು; 5 ಲಕ್ಷ ಕೇಳಿದವನೀಗ ಆಸ್ಪತ್ರೆಯಲ್ಲಿ

    ಅಂದಹಾಗೆ ರಾಹುಲ್​ ಒಟ್ಟು 69 ಐಪಿಎಲ್​ ಪಂದ್ಯಗಳ ಎರಡನೇ ಶತಕ ಇದಾಗಿದೆ. 2019ರ ಆವೃತ್ತಿಯಲ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಐಪಿಎಲ್​ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ 6ನೇ ಭಾರತೀಯ ಆಟಗಾರನೆಂಬ ಕೀರ್ತಿಗೆ ರಾಹುಲ್​ ಭಾಜನರಾಗಿದ್ದಾರೆ.

    ಇನ್ನು ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ ಆರ್​ಸಿಬಿ ಗೆಲುವಿಗೆ 207 ರನ್​ ಗುರಿ ನೀಡಿದೆ. ಗುರಿ ಬೆನ್ನತ್ತಿರುವ ಆರ್​ಸಿಬಿ ಸದ್ಯ 69 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. (ಏಜೆನ್ಸೀಸ್​)

    ರಾಹುಲ್​ ರೋರಿಂಗ್​ ಶತಕ: ಕೊಹ್ಲಿ ಪಡೆಗೆ ಬೃಹತ್​ ಗುರಿ ನೀಡಿದ ಪಂಜಾಬ್​ ಕಿಂಗ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts