More

    ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ತಂಡವೊಂದರ ಪಾಲಾಗಲಿದ್ದಾರೆ ಕನ್ನಡಿಗ ಕೆಎಲ್ ರಾಹುಲ್..?

    ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್‌ಗೆ ಆಟಗಾರರ ರಿಟೇನ್ ಪಟ್ಟಿ ಅಂತಿಮ ಹಂತದಲ್ಲಿದೆ. ಹಾಲಿ 8 ತಂಡಗಳಿಗೆ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಆಟಗಾರರು ಬೇಕಿದ್ದರಷ್ಟೇ ತಮ್ಮ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮುಂದುವರಿಸಬಹುದು. ಇಲ್ಲವಾದರೆ ಹರಾಜಿಗೆ ದಾಖಲಿಸಬಹುದು. ಈ ಬಾರಿ ಲಖನೌ ಹಾಗೂ ಅಹಮದಾಬಾದ್ ತಂಡಗಳು ಕೂಡ ಸೇರ್ಪಡೆಗೊಂಡಿದ್ದು, ಸ್ಟಾರ್ ಆಟಗಾರರಿಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ ಹೊರನಡೆದಿದ್ದಾರೆ. ರಾಹುಲ್ ಅವರನ್ನು 20 ಕೋಟಿ ರೂಪಾಯಿಗೆ ಕೊಂಡುಕೊಳ್ಳಲು ಲಖನೌ ತಂಡ ಮುಂದಾಗಿದೆ ಎಂದು ವರದಿಯಾಗಿದೆ.

    ಒಂದು ವೇಳೆ ರಾಹುಲ್ ಲಖನೌ ತಂಡಕ್ಕೆ 20 ಕೋಟಿ ರೂಪಾಯಿಗೆ ಸೇರ್ಪಡೆಯಾದರೆ, ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿಯಾಗಲಿದ್ದಾರೆ. ಸದ್ಯ ಆರ್‌ಸಿಬಿಯಿಂದ 17 ಕೋಟಿ ಪಡೆಯುತ್ತಿರುವ ವಿರಾಟ್ ಕೊಹ್ಲಿ ದಾಖಲೆಯನ್ನು ರಾಹುಲ್ ಹಿಂದಿಕ್ಕಲಿದ್ದಾರೆ. ರಾಹುಲ್ ಅವರನ್ನು ಪಂಜಾಬ್ ತಂಡ 11 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಲಖನೌ ತಂಡ ಏಕಾಏಕಿ 9 ಕೋಟಿ ಏರಿಕೆ ಮಾಡಿದೆ. ಒಂದು ವೇಳೆ ರಾಹುಲ್ ಅವರನ್ನು ಪಂಜಾಬ್ ತಂಡ ಉಳಿಸಿಕೊಂಡರೂ ಬಿಸಿಸಿಐ ನಿಯಮದಂತೆ 16 ಕೋಟಿ ಪಡೆಯಲಿದ್ದಾರೆ.

    ಕಳೆದ ಆವೃತ್ತಿಯಲ್ಲಿ ರಾಹುಲ್ 13 ಪಂದ್ಯಗಳಿಂದ 626 ರನ್ ಪೇರಿಸಿದ್ದು, ಟೂರ್ನಿಯಲ್ಲಿ ಅತಿಹೆಚ್ಚು ರನ್ ಪೇರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದರು. ಇದುವರೆಗೂ 94 ಐಪಿಎಲ್ ಪಂದ್ಯಗಳಿಂದ 3273 ರನ್ ಪೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts