More

    ಕೆಎಲ್​ ರಾಹುಲ್ ಸತತ ವೈಫಲ್ಯಕ್ಕೆ ಸ್ಟೇಡಿಯಂ ಹೆಸರೇ ಕಾರಣ!

    ಅಹಮದಾಬಾದ್: ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಸತತ 3ನೇ ಟಿ20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 1 ರನ್ ಗಳಿಸಿ ಔಟಾಗಿದ್ದ ಕೆಎಲ್ ರಾಹುಲ್ ಇದೀಗ ಸತತ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದಾರೆ. ಇದರಿಂದಾಗಿ ಕೆಎಲ್ ರಾಹುಲ್ ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ! ಅಲ್ಲದೆ ರಾಹುಲ್ ವೈಫಲ್ಯಕ್ಕೆ ಕ್ರೀಡಾಂಗಣದ ಹೆಸರೇ ಕಾರಣ ಎಂದು ಕಾಲೆಳೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎಲ್ಲ ಪಂದ್ಯಗಳು ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು, ‘ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಹುಲ್ ಆಟ ನಡೆಯಲ್ಲ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ಆಟ ನಡೆಯಲ್ಲ ಎಂದೂ ಪರೋಕ್ಷವಾಗಿ ಹೇಳಿದ್ದು, ಹೆಸರಿನ ಹೋಲಿಕೆಯಿಂದಾಗಿ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ಮೋದಿ ಸ್ಟೇಡಿಯಂನಲ್ಲಿ ವಿಫಲರಾಗುತ್ತಿದ್ದಾರೆ ಎಂಬುದಾಗಿ ಕಾಲೆಳೆಯುತ್ತಿದ್ದಾರೆ.

    ಇದನ್ನೂ ಓದಿ: ಪುರುಷರ ಕೌಂಟಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಳು ಈ ಸುಂದರಿ!

    ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿ ಎನಿಸಿರುವ ಕೆಎಲ್ ರಾಹುಲ್ ಕಳೆದ 4 ಇನಿಂಗ್ಸ್‌ಗಳಲ್ಲಿ 3 ಬಾರಿ ಶೂನ್ಯಕ್ಕೆ ಔಟಾಗಿದ್ದು, ದೊಡ್ಡ ಹಿನ್ನಡೆ ಎದುರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದರೂ ಕೆಎಲ್ ರಾಹುಲ್ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ.

    ಮದುವೆಯ ಮೂಲಕ ಸಚಿನ್, ಕೊಹ್ಲಿ, ಪಾಂಡ್ಯ, ಧವನ್ ಸಾಲಿಗೆ ಸೇರಿದ ಬುಮ್ರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts