More

    IPL 2023; ವೆಂಕಟೇಶ್​ ಅಯ್ಯರ್​-ರಿಂಕು ಸಿಂಗ್​ ಸ್ಪೋಟಕ ಬ್ಯಾಟಿಂಗ್​; KKRಗೆ 3 ವಿಕೆಟ್​ ಜಯ

    ಅಹಮದಬಾದ್​: ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ಗಳಾದ ವೆಂಕಟೇಶ್​ ಅಯ್ಯರ್​​, ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್​​ ಫಲವಾಗಿ ಕೊಲ್ಕತ ನೈಟ್​ರೈಡರ್ಸ್​​ ತಂಡವು ಗುಜರಾತ್​​ ಟೈಟಾನ್ಸ್​ ಎದುರು 3 ವಿಕೆಟ್​ಗಳ ಜಯ ಸಾಧಿಸಿದೆ.

    ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​ ತಂಡವು 4 ವಿಕೆಟ್​ ನಷ್ಟಕ್ಕೆ 204 ರನ್​ ಗಳಿಸಿತ್ತು.

    ಸಾಯಿ ಸುದರ್ಶನ್​-ವಿಜಯ್​ ಶಂಕರ್​ ಅರ್ಧಶತಕ

    ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಗುಜರಾತ್​ ಟೈಟಾನ್ಸ್​ ತಂಡವು ಮಧ್ಯಮ ಕ್ರಮಾಂಕದ ಬ್ಯಾಟ್ಸ್​​​ಮ್ಯಾನ್​ ಸಾಯಿ ಸುದರ್ಶನ್​(53 ರನ್​, 38 ಎಸೆತ, 3 ಬೌಂಡರಿ, 2 ಸಿಕ್ಸರ್​​​), ಆಲ್ರೌಂಡರ್ ವಿಜಯ್​ ಶಂಕರ್​ (63 ರನ್​, 24 ಎಸೆತ, 4 ಬೌಂಡರಿ, 5 ಸಿಕ್ಸರ್​) ಫಲವಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 204 ರನ್​ ಗಳಿಸಿ 205ರನ್​ಗಳ ಬೃಹತ್​ ಮೊತ್ತವನ್ನು ಗುರಿಯನ್ನಾಗಿ ನೀಡಿತ್ತು.

    ಇದನ್ನೂ ಓದಿ: VIDEO| ದಯವಿಟ್ಟು CSK ಕ್ಯಾಪ್ಟನ್​ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್​

    ವೆಂಕಟೇಶ್​ ಅಯ್ಯರ್​-ರಿಂಕು ಸಿಂಗ್​ ಸ್ಪೋಟಕ ಬ್ಯಾಟಿಂಗ್​

    ಬೃಹತ್​ ಮೊತ್ತದ ಗುರಿ ಬೆನ್ನತ್ತಿದ ಕೊಲ್ಕತ ತಂಡವು ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ ವೆಂಕಟೇಶ್​ ಅಯ್ಯರ್​(83 ರನ್​, 40 ಎಸೆತ, 8 ಬೌಂಡರಿ, 5 ಸಿಕ್ಸರ್​​), ನಾಯಕ ನಿತೀಶ್​ ರಾಣಾ(45 ರನ್​, 29 ಎಸೆತ, 4 ಬೌಂಡರಿ, 3 ಸಿಕ್ಸರ್​​), ರಿಂಕು ಸಿಂಗ್​(48 ರನ್​​, 21 ಎಸೆತ, 1 ಬೌಂಡರಿ, 6 ಸಿಕ್ಸರ್​​). ಮಧ್ಯಮ ಕ್ರಮಾಂಕದ ಬ್ಯಾಟ್ಸ್​​​ಮ್ಯಾನ್​ ರಿಂಕು ಸಿಂಗ್​ 20ನೇ ಓವರ್​ನಲ್ಲಿ ಸಿಡಿಸಿದ 5 ಸಿಕ್ಸರ್​ಗಳ ಫಲವಾಗಿ ಕೊಲ್ಕತ ತಂಡವು 7 ವಿಕೆಟ್​ ನಷ್ಟಕ್ಕೆ 207 ರನ್​ ಗಳಿಸಿ ಜಯದ ನಗೆ ಬೋಈರಿತ್ತು.

    ಗುಜರಾತ್​ ಪರ ರಶಿದ್​ ಖಾನ್​(4-0-37-3), ಅಲ್ಜಾರಿ ಜೋಸೆಫ್​(4-0-27-2), ಜೋಶುವಾ ಲಿಟಲ್​​(4-0-45-1), ಮೊಹಮ್ಮದ್​ ಶಮಿ(4-0-28-1) ವಿಕೆಟ್​ ಪಡೆದಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts