More

    VIDEO: ‘ಕರೊನಾ ಭಜನೆ’ ನೀವು ಕೇಳಿದ್ದೀರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಅದ್ಭುತ ಮ್ಯೂಸಿಕ್​ನೊಂದಿಗಿನ ಈ ಹಾಡು ಕಾಮಿಡಿನಾ? ನಾನ್​ಸೆನ್ಸಾ?

    ನವದೆಹಲಿ: ಚೀನಾದ ವುಹಾನ್​ನಲ್ಲಿ ಹುಟ್ಟಿದ ಕರೊನಾ ವೈರಸ್​ ಈಗ 70ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಭಾರತದಲ್ಲಿ ಸುಮಾರು 84ಜನರಲ್ಲಿ ಸೋಂಕು ದೃಢಪಟ್ಟಿದೆ.

    ಕರೊನಾ ತಡೆಗೆ ಸರ್ಕಾರಗಳು ಅನೇಕ ಕ್ರಮಗಳನ್ನು ತೆಗೆದುಕೊಂಡಿವೆ. ಹಾಗೇ ಕೆಲವರು ದೇವರ ಮೊರೆ ಹೋಗಿದ್ದಾರೆ. ಜಗತ್ತಿಗೆ ಅಂಟಿರುವ ಕರೊನಾ ತೊಲಗಲಿ ಎಂದು ಹೋಮ, ಹವನಗಳನ್ನೂ ಮಾಡುತ್ತಿದ್ದಾರೆ. ಮಂತ್ರಗಳಿಂದ ಕರೊನಾ ಓಡಿಸುವ ಪ್ರಯತ್ನವೂ ನಡೆಯುತ್ತಿದೆ. ಒಟ್ಟಿನಲ್ಲಿ ಎಲ್ಲರೂ ಕರೊನಾ ಬಗ್ಗೆ ಹೆಚ್ಚಿನ ಚಿಂತೆ ಮಾಡುತ್ತಿದ್ದು, ಸದ್ಯಕ್ಕೆ ಎದುರಾಗಿರುವ ಭೀತಿಯಿಂದ ಪಾರಾಗುವ ಪ್ರಯತ್ನದಲ್ಲಿದ್ದಾರೆ.

    ಅದೆಲ್ಲಕ್ಕಿಂತಲೂ ಸದ್ಯ ಹೆಚ್ಚು ಸುದ್ದಿಮಾಡುತ್ತಿರುವುದು ‘ಕರೊನಾ ಭಜನೆ’. ಅಮೃತಸರ್​ದ ಖ್ಯಾತ ಭಜನೆ ಹಾಡುಗಾರ ನರೇಂದ್ರ ಚಂಚಲ್​ ಅವರು ಕರೊನಾ ಮೇಲೆ ಭಜನೆ ಹಾಡಿದ್ದಾರೆ.

    ನವದೆಹಲಿಯ ಪಹರ್​ಗಂಜ್​ನಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ದುರ್ಗಾ ಮಾತೆ ಎದುರು ಕರೊನಾ ಭಜನೆಗಳನ್ನು ಹಾಡಿದ್ದಾರೆ. ಅದರ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ಬಹುಪಾಲು ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ.
    Dengue vi aaya, Swine Flu vi aaya. Chickunguniya ne shor machaya. Khabre ki-ki ho na? Kitho aaya corona? Maiya Ji, Kitho aaya corona? ಎಂದು ನರೇಂದ್ರ ಚಂಚಲ್​ ದುರ್ಗಾ ಮಾತೆಯೆದುರು ರಾಗವಾಗಿ ಹಾಡಿದ್ದಾರೆ. ಡೆಂಘೆ ಜ್ವರ ಬಂತು, ಹಂದಿ ಜ್ವರವೂ ಬಂತು. ಅಷ್ಟೇ ಏಕೆ ಚಿಕುನ್​ ಗುನ್ಯಾ ಕೂಡ ಸದ್ದು ಮಾಡಿತು. ಅದ್ಯಾವುದೂ ಅಷ್ಟು ದೊಡ್ಡ ಮಟ್ಟದ ಸುದ್ದಿಯಾಗಲಿಲ್ಲ. ಆದರೆ ಇದೆಲ್ಲಿಂದ ಬಂತು ಕರೊನಾ? ತಾಯಿ ಹೇಳು, ಎಲ್ಲಿಂದ ಬಂತು ಕರೊನಾ? ಎಂದು ಇದರ ಅರ್ಥ.

    ನರೇಂದ್ರ ಅವರೊಂದಿಗೆ ಅಲ್ಲಿರುವ ಅನೇಕರು ಧ್ವನಿ ಗೂಡಿಸಿದ್ದಾರೆ. ಚಪ್ಪಾಳೆ ತಟ್ಟುತ್ತ ತಾಳ ಹಾಕಿದ್ದಾರೆ. ಅದ್ಭುತ ಮ್ಯೂಸಿಕ್​​ನ್ನು ಈ ಭಜನೆಗೆ ನೀಡಲಾಗಿದೆ. ಸುಮಾರು 1.44 ನಿಮಿಷಗಳ ವಿಡಿಯೋವನ್ನು ಹಾಸ್ಯನಟಿ ಮಲ್ಲಿಕಾ ದುವಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡು, ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಜಾಗ್ರತೆ ವಹಿಸುವುದು ಉತ್ತಮ ಎಂದು ಕ್ಯಾಪ್ಷನ್ ಬರೆದಿದ್ದಾರೆ.

    ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಕಾಮಿಡಿ ಕಾಮೆಂಟ್​ಗಳನ್ನು ಬರೆಯುತ್ತಿದ್ದಾರೆ. ಇಂಥದ್ದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ ಎನ್ನುತ್ತಿದ್ದಾರೆ. ಕೆಲವರಂತೂ ಬೈದಿದ್ದಾರೆ. ಇದೆಂಥಾ ನಾನ್ಸೆನ್ಸ್​ ಎಂದು ಪ್ರಶ್ನಿಸಿದ್ದಾರೆ. ಯೂಟ್ಯೂಬ್, ಫೇಸ್​ಬುಕ್​ಗಳಲ್ಲೂ ಈ ಕರೊನಾ ಭಜನೆ ಸದ್ದು ಮಾಡುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts