More

    ಅಲೆಮಾರಿಗಳಿಗೆ ನೆರವಾದ ಜಪಾನಂದಜೀ ; 600ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ವಿಜಯವಾಣಿ ಸಹಯೋಗ

    ತುಮಕೂರು : ಜನತಾ ಕರ್ಯ್ೂ ಕಾರಣಕ್ಕೆ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜಿಲ್ಲೆಯ 600ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ಹಾಗೂ ಪಾತ್ರೆ ನೀಡುವ ಅಭಿಯಾನ ಪಾವಗಡ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ೌಂಡೇಶನ್ ವತಿಯಿಂದ ಶನಿವಾರ ಆರಂಭವಾಗಿದ್ದು ವಿಜಯವಾಣಿ ಸಹಯೋಗ ನೀಡಿದೆ.

    ತುಮಕೂರು ಸಮೀಪದ ಅಮಲಾಪುರ ಕೇಂದ್ರೀಯ ವಿದ್ಯಾಲಯದ ಮುಂಭಾಗದಲ್ಲಿ ಬಿಡಾರಗಳಲ್ಲಿ ಆಶ್ರಯ ಪಡೆದಿರುವ 50 ಅಲೆಮಾರಿ ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಆಹಾರ ಪದಾರ್ಥ ಹಾಗೂ ಆಹಾರ ಸಿದ್ಧಪಡಿಸಲು ಅಗತ್ಯವಾದ ಪಾತ್ರೆಗಳನ್ನು ಪಾವಗಡ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಡಾ.ಜಪಾನಂದಜೀ ನೀಡಿದರು.

    ಗ್ರಾಮಗಳಲ್ಲಿ ಸಂಬಾರ ಪದಾರ್ಥ, ಹೇರ್‌ಪಿನ್, ಸೂಜಿ, ಪಿನ್‌ಗಳನ್ನು, ತಲೆಕೂದಲು, ಬಾಚಣಿಗೆ, ರಬ್ಬರ್ ಹಾಗೂ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಲೆಮಾರಿಗಳಿಗೆ ಇತ್ತೀಚಿನ ಕರೊನಾ ಎೆಕ್ಟ್ ಬಲವಾಗಿ ಬಡಿದಿದ್ದು ಮಕ್ಕಳಿಗೆ, ವೃದ್ಧರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ‘ವಿಜಯವಾಣಿ’ ಗುರುವಾರ ವರದಿ ಪ್ರಕಟಿಸಿತ್ತು.

    ಅಲೆಮಾರಿಗಳ ಸಮಸ್ಯೆ ಬಗ್ಗೆ ವರದಿಯಲ್ಲಿ ತಿಳಿದುಕೊಂಡ ಡಾ.ಜಪಾನಂದಜೀ ಅವರು ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ೌಂಡೇಷನ್ ವತಿಯಿಂದ ದಿನಸಿ ಕಿಟ್ ನೀಡುವ ಬಗ್ಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಪಾವಗಡ ಆಶ್ರಮದಿಂದ ಅಪಾರ ಪ್ರಮಾಣದ ಆಹಾರ ಪದಾರ್ಥ ಹಾಗೂ ಪಾತ್ರೆ ಕಿಟ್ ಜತೆ ಆಗಮಿಸಿದ ಸ್ವಾಮೀಜಿ ಅಲೆಮಾರಿಗಳಿಗೆ ವಿತರಿಸಿ ಧೈರ್ಯ ತುಂಬಿದರು.

    ಕರೊನಾ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯಲ್ಲಿ ಎಲ್ಲ ಕುಟುಂಬಕ್ಕೂ ಆಹಾರ ಪದಾರ್ಥ ಸಿಗುವಂತೆ ಸ್ವಾಮೀಜಿಯೇ ಖುದ್ದು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಅಲೆಮಾರಿಗಳ ಕಣ್ಣುಗಳು ಜಿನುಗಿದವು, ದೇವರ ಸ್ವರೂಪದಲ್ಲಿ ಬಂದಿದ್ದೀರ, ಇತ್ತೀಚಿನ ದಿನದಲ್ಲಿ ನಮಗೆ ಊಟಕ್ಕೂ ತೊಂದರೆಯಾಗಿದೆ ಎಂದು ವೃದ್ಧರು, ಮಹಿಳೆಯರು ಕಣ್ಣೀರು ಹಾಕಿದರು.

    ಡಾ.ಜಪಾನಂದಜೀ ಮಾತನಾಡಿ, ವಿಜಯವಾಣಿ ಪತ್ರಿಕೆ ವರದಿ ಕಂಡು ನೆರವಾಗುವ ಸಂಕಲ್ಪ ಮಾಡಿದೆವು, ಇನ್ಫೋಸಿಸ್ ೌಂಡೇಷನ್ ಸುಧಾಮೂರ್ತಿ ಅವರು ದಾನ ಮಾಡಿದರೆ ಶ್ರೇಷ್ಠವಾದದ್ದನ್ನೇ ಮಾಡುತ್ತಾರೆ. ಅದರಂತೆ ಮನೆಗೆ ಅಗತ್ಯವಾದ ಪಾತ್ರೆಗಳು, ಅಕ್ಕಿ, ಎಣ್ಣೆ, 2 ಕೆಜಿ ಬೇಳೆ, ಉಪ್ಪು, ಸಕ್ಕರೆ, ಕಾರದಪುಡಿ, ಸಂಬಾರ ಪದಾರ್ಥ, ಮಾಸ್ಕ್, ಸೋಪು ನೀಡಲಾಗಿದೆ ಎಂದರು. ಮಾಧ್ಯಮಗಳಲ್ಲಿ ವರದಿ ಮಾಡುವುದಷ್ಟೇ ಕೆಲಸ ಎಂದು ಭಾವಿಸದೆ ವರದಿಯ ನಂತರ ಕೂಡ ಪರಿಹಾರ ಸಿಗುವವರಗೂ ವಿಜಯವಾಣಿ ನಮ್ಮ ಜತೆ ನಿಂತಿದೆ, ಸುಧಾಮೂರ್ತಿ ಅವರು ಕಳೆದ ವರ್ಷವೂ 50 ಸಾವಿರ ಕಿಟ್ ನೀಡಿದ್ದರು, ಈ ವರ್ಷವೂ ಅಲೆಮಾರಿಗಳಿಗೆ ನೆರವಾಗುವ ಸಂಕಲ್ಪ ಮಾಡಲಾಗಿದೆ ಎಂದರು.
    ರಾಮಕೃಷ್ಣ ಸೇವಾಶ್ರಮದ ಸ್ವಯಂಸೇವಕ ಮಂಜುನಾಥ್, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್, ಆಶ್ರಮದ ಸ್ವಯಂ ಸೇವಕರು, ವಿಜಯವಾಣಿ, ದಿಗ್ವಿಜಯ ಸಿಬ್ಬಂದಿ ಇದ್ದರು.

    ವಿಜಯವಾಣಿ’ ಕಾಳಜಿಗೆ ಪ್ರಶಂಸೆ : ಅಲೆಮಾರಿಗಳ ಸಮಸ್ಯೆ ಬಗ್ಗೆ ವಿಜಯವಾಣಿ ಕಾಳಜಿಗೆ ಡಾ.ಜಪಾನಂದಜೀ ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ನೆರವಾಗುವ ಮಹಾ ಸಂಕಲ್ಪಕ್ಕೆ ವಿಜಯವಾಣಿ ವರದಿಯೇ ಕಾರಣವಾಗಿದೆ. ಅವರ ಸಹಕಾರದಿಂದಲೇ ಅಲೆಮಾರಿಗಳ ಸಂಕಷ್ಟ ನಮ್ಮ ಅರಿವಿಗೆ ಬಂದಿದ್ದು ಅವರೆಲ್ಲರನ್ನೂ ಸಂಪರ್ಕಿಸಲು ಕಾರಣವಾಗಿದೆ.

    ವರದಿ ಪ್ರಕಟದ ನಂತರವೂ ಆ ಜನರೊಂದಿಗೆ ನಿಂತು ನೆರವಾಗುತ್ತಿರುವುದು ಶ್ಲಾಘನೀಯ, ಕರೊನಾ ಸಂಕಷ್ಟದ ನಡುವೆಯೂ ಪತ್ರಿಕೆ ನಿಮ್ಮ ಮನೆಗಳಿಗೆ ಬಂದು ಕಷ್ಟಕ್ಕೆ ಸ್ಪಂದಿಸುತ್ತಿದೆ. ವಿಜಯವಾಣಿ ಹಾಗೂ ಇನ್ಫೋಸಿಸ್ ೌಂಡೇಷನ್‌ಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ವಿಜಯವಾಣಿ ವರದಿಗಾರರು ಇಲ್ಲಿನ ಪರಿಸ್ಥಿತಿ ತಿಳಿಸಲು ಕಳುಹಿಸಿದ್ದ ವಿಡಿಯೋ ಕ್ಲಿಪ್‌ನಲ್ಲಿ ಜನರು ಮುದ್ದೆ ಮಾಡಲು ಬಳಸುತ್ತಿದ್ದ ಪಾತ್ರೆ ಗಮನಿಸಿದ್ದೆ. ಅದಕ್ಕೂ ತೊಂದರೆ ಎಂಬುದನ್ನು ಮನಗಂಡು ಆಹಾರ ಪದಾರ್ಥದ ಜತೆ ಪಾತ್ರೆ ಕೊಡಲು ನಿರ್ಧರಿಸಿದ್ದೇವೆ ಎಂದರು.

    ಕೋಲ್ಕತದಲ್ಲಿ 1900ರಲ್ಲಿ ಪ್ಲೇಗ್ ಮಹಾಮಾರಿಗೆ ಸಾವಿರಾರು ಜನರು ಮೃತಪಟ್ಟಾಗ ಸ್ವಾಮಿ ವಿವೇಕಾನಂದರು ಬೀದಿಗಿಳಿದು ಜನರಿಗೆ ನೆರವಾಗಿದ್ದರು. ಪ್ರಸ್ತುತ ಬಹುತೇಕ ಸ್ವಾಮೀಜಿಗಳು ಬೀದಿಗಿಳಿಯುತ್ತಿಲ್ಲ. ಆದರೆ, ವಿವೇಕಾನಂದರ ವಿಚಾರಧಾರೆ ಅನುಸರಿಸುವ ನಾವು ಅಲೆಮಾರಿಗಳಿಗೆ ನೆರವಾಗುವ ಸಂಕಲ್ಪ ತೊಟ್ಟಿದ್ದೇವೆ. ಜಿಲ್ಲೆಯಲ್ಲಿ 12 ಅಲೆಮಾರಿ ಸಮುದಾಯಗಳಿದ್ದು ಅವುಗಳನ್ನು ಗುರುತಿಸಿ ನೆರವಾಗುತ್ತೇವೆ, ಮುಂದಿನ ವಾರ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಮ್ಮ ಅಭಿಯಾನ ಮುಂದುವರಿಯಲಿದೆ.
    ಡಾ.ಜಪಾನಂದಜೀ ರಾಮಕೃಷ್ಣ ಸೇವಾಶ್ರಮ, ಪಾವಗಡ

    ಊರುಗಳಿಗೆ ವ್ಯಾಪಾರಕ್ಕೆ ಹೋದರೆ ಜನರು ಹೊಡೆದು ವಾಪಸ್ ಕಳುಹಿಸುತ್ತಿದ್ದರು, 40ಕ್ಕೂ ಹೆಚ್ಚು ಮಕ್ಕಳಿವೆ, ಎಲ್ಲರ ಮನೆಯಲ್ಲಿ ಊಟಕ್ಕೂ ತೊಂದರೆಯಾಗಿತ್ತು, ಈಗ ಸ್ವಾಮೀಜಿ ಸಹಾಯ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ.
    ಶಾರದಮ್ಮ, ಅಲೆಮಾರಿ, ಕೇಂದ್ರೀಯ ವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts