More

    ಬದಲಾಗಲಿದೆ ಐಪಿಎಲ್ ತಂಡವೊಂದರ ಹೆಸರು, ಜೆರ್ಸಿ, ಲಾಂಛನ…!

    ನವದೆಹಲಿ: ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್‌ಡೆವಿಲ್ಸ್ ಹೆಸರನ್ನು 2018ರ ಡಿಸೆಂಬರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಾಯಿಸಿದನ್ನು ನೋಡಿದ್ದೇವೆ. ಮಾಲೀಕತ್ವದಲ್ಲಿ ಕೊಂಚ ಬದಲಾವಣೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರಿಸಲಾಯಿತು. ಇದೀಗ ಅದೇ ಸಾಲಿಗೆ ಮತ್ತೊಂದು ತಂಡ ಸೇರ್ಪಡೆಗೊಳ್ಳುತ್ತಿದೆ. ಅದುವೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ. ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿದೆ. ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಭಾಗವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇದುವರೆಗೆ ಪ್ರಶಸ್ತಿ ಜಯಿಸಿಲ್ಲ. ಹೀಗಾಗಿ ಈ ಬಾರಿ ಅದೃಷ್ಟ ಒಲಿಸಿಕೊಳ್ಳುವ ಹಂಬಲದೊಂದಿಗೆ ತಂಡ ಹೊಸ ಹೆಸರು, ಜೆರ್ಸಿ ಮತ್ತು ಲಾಂಛನದೊಂದಿಗೆ ಕಣಕ್ಕಿಳಿಯಲಿದೆ.

    ಇದನ್ನೂ ಓದಿ: “100 crores’ ಬೆನ್ನುಹತ್ತಿದ ಆ ದಿನಗಳ ಚೇತನ್

    ಹೆಸರು, ಲಾಂಛನ, ಜೆರ್ಸಿ ಬದಲಾವಣೆಯೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 14ನೇ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ. ಈ ವಿವರಗಳು ಬುಧವಾರ ಅಧಿಕೃತವಾಗಿ ಅನಾವರಣಗೊಳ್ಳಲಿವೆ. ಈ ಮುನ್ನ ಫ್ರಾಂಚೈಸಿ ತಂಡದ ಹೆಸರು ಬದಲಾಯಿಸಿದ್ದಾರೆ. ತಕ್ಷಣವೇ ಆಗಿರುವ ಪ್ರಕ್ರಿಯೆ ಇದಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಹಾಗೂ ಕರಣ್ ಪೌಲ್ ತಂಡದ ಮಾಲೀಕರಾಗಿದ್ದು, 2014ರಲ್ಲಿ ರನ್ನರ್‌ಅಪ್ ಆಗಿದ್ದೇ ತಂಡದ ಅತ್ಯುತ್ತಮ ನಿರ್ವಹಣೆಯಾಗಿದೆ.

    ಇದನ್ನೂ ಓದಿ: ಬಾಲಿವುಡ್ ಗೆ ರವಿ ಬಸ್ರೂರು

    ಏಪ್ರಿಲ್ ಎರಡನೇ ವಾರದಿಂದ 14ನೇ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆಗಳಿದ್ದು, ಗುರುವಾರ (ಫೆ.18) ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಪಂಜಾಬ್ ತಂಡಕ್ಕೆ ಕನ್ನಡಿಗರಾದ ಕೆಎಲ್ ರಾಹುಲ್ ನಾಯಕನಾದರೆ, ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ದಾಖಲೆ ಗೆಲುವು, ಸರಣಿ ಸಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts