More

    ನಿಮ್ಮ ಸಮಸ್ಯೆಗಳಿಗೆ ನಮ್ಮಿಂದ ಪರಿಹಾರ

    ಕಾನಹೊಸಹಳ್ಳಿ: ಕಂದಾಯ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ನಿಮ್ಮ ಮುಂದೆ ಬಂದಿದ್ದೇವೆ ಎಂದು ತಹಸೀಲ್ದಾರ್ ಜಗದೀಶ್ ತಿಳಿಸಿದರು.

    ಹಾರಕಬಾವಿಯಲ್ಲಿ ಶುಕ್ರವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಹಣಿ, ಪೋಡಿ, ದಾನ, ಸರ್ವೇ ದಾಖಲೆ, ಪಡಿತರ ಕಾರ್ಡ್, ಮಾಸಾಶನ, ಮನಸ್ವಿನಿ, ರಾಷ್ಟ್ರೀಯ ಭದ್ರತಾ ಯೋಜನೆ, ಅಂಗವಿಕಲ, ವಿಧವಾ, ಸಂಧ್ಯಾಸುರಕ್ಷಾ ಮಾಸಾಶನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಾರೆ ಕೂಡಲೆ ಪರಿಹರಿಸಲಾಗುವುದು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 15 ಜನರಿಗೆ ಮಾಸಾಶನ ವೇತನದ ಆದೇಶ ನೀಡಲಾಗಿದೆ ಎಂದರು.

    ಸಮಸ್ಯೆಗಳಿಗೆ ಸಂಬಂಧಿಸಿ ಸುಮಾರು 130 ಅರ್ಜಿ ಬಂದಿದ್ದವು. ಮಾಸಾಶನ, ಪಿಂಚಣಿ, ಅಂಗವಿಕಲ ಮತ್ತು ವಿಧವಾ ವೇತನಕ್ಕೆಂದು ಕೆಲವರು ಸಲ್ಲಿಸಿದ ಅರ್ಜಿಗಳ ಪೈಕಿ 15 ಜನರಿಗೆ ಸ್ಥಳದಲ್ಲಿ ಅದೇಶ ಪತ್ರ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮೂಗಮ್ಮ, ಉಪಾಧ್ಯಕ್ಷೆ ಚನ್ನಬಸಮ್ಮ, ತಾಪಂ ಮಾಜಿ ಸದಸ್ಯ ಎಸ್.ಶೇಖರಪ್ಪ, ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ, ಡಿಎಚ್‌ಒ ಡಾ.ಎಸ್.ಪಿ.ಪ್ರದೀಪ್, ಜಿಪಂ ಎಇಇ ಮಲ್ಲಿಕಾರ್ಜುನ, ಶಾಸಕರ ಆಪ್ತ ಸಹಾಯಕ ಶ್ರೀಕಾಂತ, ಅಧಿಕಾರಿಗಳಾದ ಡಾ.ವಿನೋದಕುಮಾರ್, ಜಗದೀಶ್ ದಿಗಡೂರು, ನಾಗನಗೌಡ ಪಾಟೀಲ್, ಬಿ.ಎಸ್.ಮಂಜುನಾಥ, ತಿಮ್ಮಣ್ಣ ಚಾಮನೂರು, ಮೊಹಬೂಪಾಷ್, ಜಮೀಲ್‌ಆಹ್ಮದ್, ರಾಮಾಂಜಿನಯ್ಯ, ತಳವಾರ ಶರಣಪ್ಪ, ಮುರುಳಿ, ವೀರಣ್ಣ, ಮರುಳುಸಿದ್ದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts