More

  ಅಕ್ರಮವಾಗಿ ವಾಸಿಸುತ್ತಿದ್ದ ಕೆಎಲ್​ಎಫ್​ ಮುಖ್ಯಸ್ಥ ಹರ್ಮೀತ್ ಸಿಂಗ್ ಶವ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯ ಇಲ್ಲ ಎಂದ ಪಾಕ್​

  ಲಾಹೋರ್​: ಹತ್ಯೆಯಾದ ಖಲಿಸ್ತಾನ್​ ಲಿಬರೇಷನ್​ ಫೋರ್ಸ್​ನ (ಕೆಎಲ್​ಎಫ್​) ಮುಖ್ಯಸ್ಥ ಹರ್ಮೀತ್​ ಸಿಂಗ್​ ಅಲಿಯಾಸ್​ ಹ್ಯಾಪಿ ಪಿಎಚ್​ಡಿ ಶವವನ್ನು ಭಾರತಕ್ಕೆ ರವಾನಿಸಲು ಪಾಕ್​ ಹಿಂದೆ ಸರಿದಿದೆ.

  ಹರ್ಮೀತ್​ಸಿಂಗ್​ ಸುಳ್ಳು ದಾಖಲೆಗಳ ಮೂಲಕ ಪಾಕಿಸ್ತಾನದಲ್ಲಿ ವಾಸ ಮಾಡುತ್ತಿದ್ದರಿಂದ ಆತನ ಶವ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಪಾಕ್​ ತಿಳಿಸಿದೆ.

  ಪಂಜಾಬ್​​ನ ಅಮೃತಸರದಲ್ಲಿರುವ ಹರ್ಮೀತ್​ಸಿಂಗ್​ ಕುಟುಂಬದವರು ಶವ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದ್ದರು.
  ಹರ್ಮೀತ್​ ಸಿಂಗ್​​ನನ್ನು 2 ದಿನಗಳ ಹಿಂದೆ ಲಾಹೋರ್​ ಸಮೀಪದ ಡೇರಾ ಚಾಹಲ್​ ಗುರುದ್ವಾರದಲ್ಲಿ ಸ್ಥಳೀಯ ಗ್ಯಾಂಗ್​ ಗುಂಡು ಹಾರಿಸಿ ಕೊಲೆ ಮಾಡಿತ್ತು. ಮಾದಕ ವಸ್ತು ಕಳ್ಳಸಾಗಣೆ ವ್ಯವಹಾರದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಆತನನ್ನು ಕೊಲೆ ಮಾಡಲಾಗಿದೆ.

  ಪಾಕಿಸ್ತಾನ ಹಾಗೂ ಭಾರತದಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿ ಈತ 2 ರಾಷ್ಟ್ರಗಳಿಗೆ ಬೇಕಾದ ಪ್ರಮುಖ ಆರೋಪಿಯಾಗಿದ್ದ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts