More

    ವರ್ಷಾಚರಣೆ ಅತಿರೇಕ ತಡೆಗೆ ಖಾಕಿ ನಾಕಾಬಂದಿ; ತಡರಾತ್ರಿ 1 ಗಂಟೆ ವರೆಗೆ ಮಾತ್ರ ಅವಕಾಶ

    ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಆದ್ಯತೆಯಾಗಿ ಪರಿಗಣಿಸಿ ರಾಜಧಾನಿಯೆಲ್ಲೆಡೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿ. 31ರ ತಡರಾತ್ರಿ 1 ಗಂಟೆವರೆಗೆ ವರ್ಷಾಚರಣೆಗೆ ಸಮಯ ನಿಗದಿಯಾಗಿದ್ದು, ಸಾರ್ವಜನಿಕರು ಉದಾಸೀನ ಮಾಡಬಾರದು ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಸೂಚಿಸಿದ್ದಾರೆ.
    ವರ್ಷಾಚರಣೆಗೆ ಬಿಗಿಭದ್ರತೆ ಒದಗಿಸುವ ಸಲುವಾಗಿ ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ, ಅಬಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಶಾಮಕ, ಬೆಸ್ಕಾಂ, ಬಿಎಂಆರ್‌ಸಿಎಲ್ ಮತ್ತು ಇತರ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂಜಾಗೃತಾ ಕ್ರಮ ವಹಿಸಲಾಗಿದೆ. ಎಂ.ಜಿ. ರಸ್ತೆ- ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ವೃತ್ತ, ಫೀನಿಕ್ಸ್ ಮಾಲ್, ಇಂದಿರಾನಗರ 100 ಅಡಿ ರಸ್ತೆ ಹಾಗೂ ಪ್ರಮುಖ ಸ್ಟಾರ್ ಹೋಟೆಲ್, ಪಬ್, ಕ್ಲಬ್‌ಗಳಲ್ಲಿ ಹೆಚ್ಚಿನ ಜನರು ವರ್ಷಾಚರಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಎಲ್ಲೆಲ್ಲ ಪೊಲೀಸ್ ಇಲಾಖೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಸುದ್ದಿಗೋಷ್ಠಿಯಲ್ಲಿ ತಾಕೀತು ಮಾಡಿದರು.
    ವಿಶೇಷವಾಗಿ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ 4 ಡಿಸಿಪಿ, 10 ಎಸಿಪಿ, 30 ಇನ್‌ಸ್ಪೆಕ್ಟರ್ ಸೇರಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗುತ್ತದೆ. ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಕಿಯೋಸ್ಕ್ ಸ್ಥಾಪಿಸಲಾಗುತ್ತದೆ. ಮಕ್ಕಳು ನಾಪತ್ತೆ ಸೇರಿ ಅಪರಾಧ ಕೃತ್ಯದ ಬಗ್ಗೆ ತುರ್ತು ಸೇವೆ ಸಿಗಲಿದೆ. ಸೂಕ್ತ ಕಣ್ಗಾವಲು ಏರ್ಪಡಿಸಲು ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ಬೈನಾಕುಲರ್ ಜೊತೆಗೆ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
    ನಗರದ ಇತರ ಸ್ಥಳಗಳಾದ ಫೀನಿಕ್ಸ್ ಮಾಲ್, ಮಾಲ್ ಆ್ ಏಷ್ಯಾ ಹಾಗೂ ಕೋರಮಂಗಲ, ಇಂದಿರಾನಗರ, ಮಾರತ್ತಹಳ್ಳಿ, ಎಚ್‌ಆರ್‌ಬಿಆರ್ ಲೇಔಟ್, ಏರ್‌ಪೋರ್ಟ್ ರಸ್ತೆ, ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ನಡೆಯಲಿರುವ ವರ್ಷಾಚರಣೆಗೂ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿನ ಪ್ರದೇಶಕ್ಕೆ 4 ಡಿಸಿಪಿ, 10 ಎಸಿಪಿ, 25 ಇನ್‌ಸ್ಪೆಕ್ಟರ್ ಸೇರಿ 2,500 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

    ‘ನಮ್ಮ-112’ಗೆ ಕರೆ ಮಾಡಿ

    ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಡಿ. 31ರ ತಡರಾತ್ರಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಶ್ವಾನ ದಳ ಮತ್ತು 10 ಚೆಕ್‌ಪೋಸ್ಟ್ ತೆರೆದಿದ್ದು, ತಪಾಸಣೆ ನಡೆಸಲಾಗುತ್ತದೆ. ಸಂಚಾರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗುತ್ತಿದೆ. ವರ್ಷಾಚರಣೆಗೆ ಅಕ್ರಮವಾಗಿ ಮದ್ಯ ಸಂಗ್ರಹಿಸುವರ ಮೇಲೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ. ಕಾನೂನುಬಾಹಿರ ಚಟುವಟಿಕೆ, ಡ್ರಗ್ಸ್ ಪೂರೈಕೆ ಇನ್ನಿತರ ಸಮಾಜಘಾತುಕ ಚಟುವಟಿಕೆಗಳು ಕಂಡುಬಂದರೆ ಕೂಡಲೇ ‘ನಮ್ಮ-112’ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್ ಜನರಿಗೆ ಮನವಿ ಮಾಡಿದ್ದಾರೆ.

    ಕೆವೈಸಿ ಕಡ್ಡಾಯ

    ಕ್ಲಬ್, ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರು, ತಮ್ಮ ಗ್ರಾಹಕರ ಹೆಸರು, ವಿಳಾಸ, ಗುರುತಿನ ಚೀಟಿ, ಮೊಬೈಲ್ ನಂಬರ್ ಸಂಗ್ರಹಿಸಬೇಕು. ನಿಗದಿತ ಮಿತಿಯನ್ನು ಮೀರದಂತೆ ಪಾಸ್ ವಿತರಿಸಬೇಕು. ಒಂದು ವೇಳೆ ಅಹಿತಕರ ಘಟನೆ ನಡೆದಾಗ ತನಿಖೆಗೆ ಅನುಕೂಲ ಆಗಲಿದೆ.

    ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಬಂದ್

    ವರ್ಷಾಚರಣೆ ಮುಗಿದ ಮೇಲೆ ಏಕಕಾಲಕ್ಕೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಏಕಾಏಕಿ ನುಗ್ಗುತ್ತಾರೆ. ಆದರಿಂದ ಈ ಬಾರಿ ಡಿ. 31ರ ರಾತ್ರಿ 11ರಿಂದ ತಡರಾತ್ರಿ 2 ಗಂಟೆ ವರೆಗೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ನಿರ್ಗಮಿಸಲು ಅವಕಾಶ ಇರುವುದಿಲ್ಲ. ಬದಲಿಗೆ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಮೂಲಕ ನಿರ್ಗಮಿಸಬೇಕು.

    ಎಲ್ಲ ಪೊಲೀಸರ ನಿಯೋಜನೆ

    ಇಬ್ಬರು ಹೆಚ್ಚುವರಿ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್‌ಸ್ಪೆಕ್ಟರ್, 600 ಸಬ್‌ಇನ್‌ಸ್ಪೆಕ್ಟರ್, 600 ಎಎಸ್‌ಐ, 1,800 ಹೆಡ್ ಕಾನ್‌ಸ್ಟೆಬಲ್ ಮತ್ತು 5,200 ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.

    ಪೆಡ್ಲರ್, ರೌಡಿ ಪರೋಡೆ

    ಮಾದಕ ದ್ರವ್ಯ ಪೂರೈಕೆ ಮತ್ತು ಅಕ್ರಮ ಚಟುವಟಿಕೆ ತಡೆಗಟ್ಟುವ ಸಲುವಾಗಿ ನಗರದ ಎಲ್ಲೆಡೆ ಹಳೆಯ ಪೆಡ್ಲರ್ ಮತ್ತು ರೌಡಿಗಳ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಕೆಲ ಪೆಡ್ಲರ್ ಮತ್ತು ರೌಡಿಗಳ ಮನೆ, ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

    ಮೇಲ್ಸೇತುವೆ ಸಂಚಾರ ಬಂದ್

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ ಹೊರತುಪಡಿಸಿದರೆ ಉಳಿದ ನಗರದ ಎಲ್ಲ ಮೇಲ್ಸೇತುವೆಗಳ ಸಂಚಾರವನ್ನು ಡಿ.31ರ ರಾತ್ರಿ 11 ಗಂಟೆಯಿಂದ ಜ.1ರ ಬೆಳಗಿನ ಜಾವ 6 ಗಂಟೆ ವರೆಗೂ ನಿಷೇಧ ಮಾಡಲಾಗುತ್ತದೆ. ಬೈಕ್ ವ್ಹೀಲಿಂಗ್, ಅಡ್ಡಾದಿಟ್ಟಿ ಚಾಲನೆ ಸೇರಿ ಅಜಾಗರೂಕತೆಯಿಂದ ವಾಹನ ಚಲಾಯಿಸುವರ ಮೇಲೆ ನಿಗಾವಹಿಸಲು ಪ್ರತಿಯೊಂದು ಸಂಚಾರ ಠಾಣೆಗಳಲ್ಲಿ ತಂಡ ರಚನೆ ಮಾಡಿದ್ದು, ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಡಿ.31ರಂದು ರಾತ್ರಿ 11 ಗಂಟೆ ಬಳಿಕ ಒಳ ಪ್ರವೇಶಕ್ಕೆ ಅನುವು ಮಾಡಿಕೊಳ್ಳಲಾಗುತ್ತದೆ.

    ವಾಹನ ಪ್ರವೇಶ, ಪಾರ್ಕಿಂಗ್ ನಿಷೇಧ

    ಡಿ.31ರ ರಾತ್ರಿ 8 ಗಂಟೆಯಿಂದ ತಡರಾತ್ರಿ 1 ಗಂಟೆ ವರೆಗೆ ಎ.ಜಿ. ರಸ್ತೆಯಲ್ಲಿ ಪೊಲೀಸ್ ವಾಹನ, ಕರ್ತವ್ಯನಿರತ ಸೇವಾ ವಾಹನ ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಇದಕ್ಕೂ ಮೊದಲು ಸಂಜೆ 4 ಗಂಟೆಯಿಂದ ಜ.1ರ ಬೆಳಗಿನ ಜಾವ 3 ಗಂಟೆ ವರೆಗೂ ಪಾರ್ಕಿಂಗ್ ಸಹ ನಿಷೇಧಿಸಲಾಗಿದೆ ಎಂದು ಎಂ.ಎನ್. ಅನುಚೇತ್ ಸ್ಪಷ್ಪಪಡಿಸಿದ್ದಾರೆ. ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ಸರ್ಕಲ್ ವರೆಗೆ, ಬ್ರಿಗೇಡ್ ರಸ್ತೆಯಲ್ಲಿ ಆರ್ಟ್ಸ್ ಆ್ಯಂಡ್ ಕ್ರ್‌ಟಾ ್ಸ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ, ಚರ್ಚ್ ಸ್ಟ್ರೀಟ್‌ನಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ ಮತ್ತು ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ. ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್‌ಬಿಐ) ವೃತ್ತದ ವರೆಗೂ ಈ ನಿಯಮ ಅನ್ವಯ ಆಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

    ಮದ್ಯದಂಗಡಿ, ಕ್ಲಬ್, ಪಬ್ ಮತ್ತು ರೆಸ್ಟೋರೆಂಟ್‌ಗಳಿಗೆ ವಿಶೇಷ ಸಮಯ ನಿಗದಿ ಇಲ್ಲ. ಈಗಾಗಲೇ ನಿಗದಿಯಾದ ಸಮಯಕ್ಕೆ ಬಂದ್ ಮಾಡಬೇಕು. ಕೋವಿಡ್ ಕುರಿತು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಹೊರಡಿಸುವ ಮಾರ್ಗಸೂಚಿ ಪಾಲಿಸಬೇಕು.
    ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts