More

    ಕೆರೆಕೋಡಿಯಮ್ಮ ದೇವಿ ತೆಪ್ಪೋತ್ಸವ

    ಅರಕಲಗೂಡು: ತಾಲೂಕಿನ ಕೊಣನೂರು ದೊಡ್ಡಕೆರೆಯಲ್ಲಿ ಮಂಗಳವಾರ ರಾತ್ರಿ ಶ್ರೀ ಭವಾನಿ ಶಂಕರಿ ಕೆರೆಕೋಡಿಯಮ್ಮ ದೇವಿ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.

    ನವರಾತ್ರಿ ಅಂಗವಾಗಿ ಭವಾನಿ ಶಂಕರಿ ಕೆರೆಕೋಡಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ದೇವಿಗೆ ಒಂಬತ್ತು ದಿನವೂ ವಿಶೇಷ ಅಲಂಕಾರ, ಹೋಮ ನೆರವೇರಿಸುವುದರೊಂದಿಗೆ ನಿತ್ಯ ಸಂಜೆ ಲಲಿತಾ ಸಹಸ್ರನಾಮ ಪಠಣ, ಭಜನೆ ಹಾಗೂ ಕೀರ್ತನೆಗಳನ್ನು ಹಾಡಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ವಿಜಯದಶಮಿ ಪ್ರಯುಕ್ತ ಕೆರೆಕೋಡಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಅಲಂಕೃತ ತೆಪ್ಪದ ಮೇಲೆ ಕೂರಿಸಿ ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ಮಾಡಲಾಯಿತು. ಸಹಸ್ರಾರು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಬಾಣ ಬಿರುಸುಗಳ ಪ್ರದರ್ಶನದೊಂದಿಗೆ ಶರನ್ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.

    ದೇವಸ್ಥಾನ ಸೇರಿದಂತೆ ಹಲವು ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ವಿಜಯದಶಮಿಯಂದು ಅಮ್ಮನವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts