More

    ವೆಂಕಟಗಿರಿಕೋಟೆ ಕೆರೆ ನೀರಿಂದ ಜಮೀನುಗಳು ಜಲಾವೃತ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಯಬೇಕಾಗಿರುವ ಎಚ್.ಎನ್.ವ್ಯಾಲಿ ನೀರನ್ನು ಬಂದ್ ಮಾಡಿ, ವೆಂಕಟಗಿರಿಕೋಟೆ ಕೆರೆಗೆ ಹರಿಸಲಾಗುತ್ತಿದ್ದು, ರಾತ್ರಿ ವೇಳೆ ತೂಬಿನ ಗೇಟ್ ವಾಲ್ ತೆರೆದಿದ್ದು, ಕೆರೆ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.


    ಎಚ್.ಎನ್.ವ್ಯಾಲಿ ಯೋಜನೆಯಡಿ ಈ ಭಾಗದಲ್ಲಿನ ಆವತಿ, ವೆಂಕಟಗಿರಿಕೋಟೆ ಕೆರೆಗೆ ನೀರು ಹರಿಸಿದ್ದಾರೆ. ಹೆಚ್ಚಿನ ಪ್ರಮಾಣದ ನೀರು ಹರಿಸಿ ಕೆರೆಗಳು ತುಂಬಿಸುವಂತೆ ನಾವು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವು. ಸ್ಥಳೀಯ ಶಾಸಕರಿಗೂ ಮನವಿ ಮಾಡಿದ್ದೆವು.ಆದರೆ ಒಂದು ಇಂಚೂ ನೀರು ಹೆಚ್ಚಿಗೆ ಬಿಟ್ಟಿರಲಿಲ್ಲ. ಈಗ ಎಲ್ಲೆಡೆ ಮಳೆಯಾಗುತ್ತಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿದ್ದ ನೀರನ್ನು ಬಂದ್ ಮಾಡಿ, ಪೂರ್ಣ ಪ್ರಮಾಣದಲ್ಲಿ ನಮ್ಮ ಭಾಗದ ಕೆರೆಗಳಿಗೆ ನೀರು ಬಿಟ್ಟಿರುವ ಕಾರಣ, ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಇದರ ಜತೆಗೆ ತೂಬು ತೆರೆದಿದ್ದು, ತೋಟಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ರೈತ ಮುಖಂಡ ರಾಮಚಂದ್ರಪ್ಪ ಅಳಲು ತೋಡಿಕೊಂಡಿದ್ದಾರೆ. ದ್ರಾಕ್ಷಿ, ಗುಲಾಬಿ, ಜೋಳ, ರೇಷ್ಮೆ ಸೇರಿ ಹಲವು ಬೆಳೆ ನೀರಿನಲ್ಲಿ ಮುಳುಗಡೆಯಾಗಿವೆ. ದ್ರಾಕ್ಷಿ ತೋಟಗಳ ಕಲ್ಲಿನ ಕೂಚಗಳೆಲ್ಲವೂ ನೆಲಕ್ಕುರುಳಿವೆ. ನೀರು ಇದೇ ವೇಗದಲ್ಲಿ ತೋಟಗಳ ಬಳಿ ಹರಿದರೆ, ಮನೆಗಳೂ ಕೊಚ್ಚಿಕೊಂಡು ಹೋಗುವ ಆತಂಕ ಶುರುವಾಗಿದೆ ಎಂದು ಸ್ಥಳೀಯ ಸಂದೀಪ್ ಭೀತಿ ವ್ಯಕ್ತಪಡಿಸಿದ್ದಾರೆ.


    ಕೆರೆಯ ಬಳಿಯಿಂದ ಕಾಲುವೆ ನಿರ್ಮಾಣ ಮಾಡಲು ಜಾಗ ಗುರ್ತಿಸಿಕೊಡುವಂತೆ ಭೂಮಾಪನ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಇದುವರೆಗೂ ಜಾಗ ಗುರ್ತಿಸಿಕೊಟ್ಟಿಲ್ಲ. ಈಗ ಎಲ್ಲೆಡೆ ಮಳೆ ಹೆಚ್ಚಾಗಿದ್ದು, ಮಳೆಯ ನೀರು ಕೋಡಿ ಹರಿಯುತ್ತಿದೆ. ತೂಬು ತೆರೆದಿಲ್ಲ ಎಂದು ಎಚ್.ಎನ್.ವ್ಯಾಲಿ ಯೋಜನೆಯ ಎಇಇ ಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts