More

    ಮೇ ಎರಡನೇ ವಾರದಲ್ಲಿ ಪರೀಕ್ಷೆಗಳು ನಡೆಯೋದು ಬಹುತೇಕ ಖಚಿತ, ನಿರ್ಧಾರ ಪ್ರಕಟಿಸಿದ ವಿಶ್ವವಿದ್ಯಾಲಯ ಸಮಿತಿ

    ಬೆಂಗಳೂರು: ರಾಜ್ಯದಲ್ಲಿ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದೆ. ಮೇ 3ರ ನಂತರ ಲಾಕ್​ಡೌನ್​ ತೆರವು ಬಹುತೇಕ ಖಚಿತವಾಗಿರುವುದರಿಂದ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ನಡುವೆಯೇ ಪರೀಕ್ಷೆ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೂ ಮೇ 3ರ ನಂತರವೇ ದಿನಾಂಕ ನಿಗದಿಯಾಗಿ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಆದರೆ, ಈ ನಿಟ್ಟಿನಲ್ಲಿ ಕೇರಳ ಇನ್ನೂ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು.

    ಕರೊನಾ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿ ರಾಜ್ಯವಾಗಿ ಪರಿಣಮಿಸಿರುವ ಕೇರಳದಲ್ಲಿ ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಹಲವು ನಿರ್ಬಂಧಗಳನ್ನು ಸಡಿಲಿಸಿದೆ. ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮರುಆರಂಭಿಸುವ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಿದೆ. ಮೇ ಎರಡನೇ ವಾರದಲ್ಲಿ ಕೇರಳ ವಿವಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.

    ಕುಲಪತಿ ವಿ.ಪಿ. ಮಹದೇವನ್​ ಪಿಳ್ಳೈ ನೇತೃತ್ವದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಆದರೆ, ಪರೀಕ್ಷಾ ವೇಳಾಪಟ್ಟಿಯನ್ನು ಲಾಕ್​ಡೌನ್​ ಅವಧಿ ಮುಗಿದ ಬಳಿಕಷ್ಟೇ ಪ್ರಕಟಿಸಲಿದೆ. ಪರೀಕ್ಷೆ ಮುಗಿದ ಬಳಿಕ ತ್ವರಿತವಾಗಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

    ಆರೋಗ್ಯ ಇಲಾಖೆ ನೀಡುವ ನಿರ್ದೇಶನ ಹಾಗೂ ಸೂಚನೆಗಳನ್ನು ಮೌಲ್ಯಮಾಪನ ವೇಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸಮಿತಿ ಸ್ಪಷ್ಟಪಡಿಸಿದೆ.
    ಈಗಾಗಲೇ ಬಾಕಿವುಳಿದಿರುವ ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಮೇ 11ರ ನಂತರ ಕ್ರಮ ಕೈಗೊಳ್ಳಬೇಕೆಂದು ಕೇರಳ ಉನ್ನತ ಶಿಕ್ಷಣ ಇಲಾಖೆ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಆದೇಶ ಹಿಂಪಡೆದಿತ್ತು.

    ನೀರಾಯ್ತು, ಇದೀಗ ಗಾಳಿಯ ಮಾಲಿನ್ಯಕಾರಕ ಕಣಗಳಲ್ಲೂ ಕರೊನಾ ವೈರಸ್​? ಸೋಂಕಿಲ್ಲದಿದ್ದರೂ ಹರಡುವುದಕ್ಕೆ ಇದೇ ಕಾರಣವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts