More

    ನೀಟ್​ ಪರೀಕ್ಷೆಗೂ ಮುನ್ನ ಒಳ ಉಡುಪು ತೆಗೆಯಲು ಸೂಚನೆ: ಕೊನೆಗೂ ದಾಖಲಾಯ್ತು ಕೇಸ್​

    ಕಣ್ಣೂರು: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್​ಗೆ ಹಾಜರಾಗುವ ಮುನ್ನ ಒಳ ಒಡುಪು ಕಳಚುವಂತೆ ಸೂಚಿಸಲಾಗಿದೆ ಎಂದು ಕೇರಳದ ವಿದ್ಯಾರ್ಥಿನಿಯೊಬ್ಬಳು ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಈ ಬಗ್ಗೆ ಕೊನೆಗೂ ಕೇರಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ವಿದ್ಯಾರ್ಥಿನಿ ನೀಡಿದ ದೂರು ಸುಳ್ಳು ಎಂದು ಕೇಂದ್ರದ ಅಧೀಕ್ಷಕರು ಹೇಳಿಕೆ ನೀಡಿದ್ದರು. ಸದ್ಯ ಕೇಸ್​​ ದಾಖಲಾಗುವ ಮೂಲಕ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

    ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಪೊಲೀಸರು ವಿದ್ಯಾರ್ಥಿನಿಯಿಂದ ಹೇಳಿಕೆಯನ್ನೂ ಪಡೆದಿದ್ದಾರೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕೇರಳದ ಕೊಲ್ಲಂ ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ಸೋಮವಾರ ದೂರು ನೀಡಿದ್ದರು, ತನ್ನ ಮಗಳು ನೀಟ್​​ ಬುಲೆಟಿನ್​ನಲ್ಲಿ ಹೇಳಲಾದ ಡ್ರೆಸ್​ ಕೋಡ್​ ಅನುಸರಿಸಿದ್ದಾಳೆ.ಅದರಲ್ಲಿ ಒಳ ಉಡುಪಿನ ಬಗ್ಗೆ ಏನನ್ನೂ ಹೇಳುವುದಿಲ್ಲ, ಆದಾಗ್ಯೂ ಪರೀಕ್ಷೆ ಬರೆಯಲು ಅದನ್ನು ತೆಗೆಯುವಂತೆ ಹೇಳಲಾಗಿದೆ ಎಂದು ಸ್ಥಳೀಯ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. (ಏಜೆನ್ಸೀಸ್​)

    ಇಂದಿಗೂ ಸರಿಸಾಟಿಯಿಲ್ಲ ಈಕೆಯ ಸೌಂದರ್ಯಕ್ಕೆ! ಶೀಘ್ರದಲ್ಲೇ ತೆರೆಗೆ ಬರಲಿದೆ ಮಧುಬಾಲಾ ಬಯೋಪಿಕ್​

    ಪೊನ್ನಿಯಿನ್​ ಸೆಲ್ವನ್​ ಚಿತ್ರಕ್ಕೆ ಮತ್ತೊಂದು ಅಡ್ಡಿ: ನಿರ್ದೇಶಕರಿಗೆ ಕರೋನಾ ಲಕ್ಷಣ, ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts