More

    ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ; ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅಸಮಾಧಾನ

    ಕೊರಟಗೆರೆ: ರೈತರು ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಬರಬಾರದು. ಕೃಷಿ, ತೋಟಗಾರಿಕೆ, ಅರಣ್ಯ, ಬೆಸ್ಕಾಂ ಹಾಗೂ ಇತರ ಇಲಾಖೆ ಅಧಿಕಾರಿಗಳು ರೈತರಿದ್ದಲ್ಲಿಗೇ ಹೋಗಿ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಡಾ. ಜಿ ಪರಮೇಶ್ವರ್ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕರೊನಾದಿಂದ ತಾಲೂಕಿನಲ್ಲಿ ಯಾವೊಂದು ಇಲಾಖೆಯಲ್ಲಿಯೂ ಯೋಜನೆಗಳು ಸಾಕಾರಗೊಂಡಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದರು.

    ತಾಲೂಕಿನಲ್ಲಿ ತೋಟಗಾರಿಕೆ ಬೆಳೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶವಿದೆ. ಆದರೆ ಸಹಾಯಕ ನಿರ್ದೇಶಕರಿಗೆ ಈ ಬಗ್ಗೆ ಹೇಳಿದರೆ ಅವರದೇ ಆದ ವ್ಯಾಖ್ಯಾನ ನೀಡುತ್ತಿದ್ದು, ಅಧಿಕಾರಿಗಳಿಗೆ ಕೆಲಸ ವಾಡಲು ಇಚ್ಛಾಶಕ್ತಿ ಕೊರತೆಯಿದೆ ಎಂದರು. ಈ ಬಾರಿ ಉತ್ತಮ ಮಳೆಯಾಗಿದೆ. ಆದರೆ, ಸರ್ಕಾರ ರೈತರಿಗೆ ಸಮರ್ಪಕ ಗೊಬ್ಬರ ನೀಡುವಲ್ಲಿ ವಿಫಲವಾಗಿದೆ. ಅದೇ ರೀತಿ ನರೇಗಾದಲ್ಲಿಯೂ ಹೆಚ್ಚಿನ ಕೆಲಸಗಳು ನಡೆದಿಲ್ಲ. ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸುತ್ತೇವೆ ಎಂದು ಕೇವಲ ಬಾಯಲ್ಲಿ ಹೇಳದೇ ವಾಸ್ತವದಲ್ಲಿ ವಾಡಬೇಕು ಎಂದು ಕುಟುಕಿದರು.

    ರೈತರ ಭೂಮಿಗೆ ಸಮರ್ಪಕ ಬೆಲೆ ಸಿಗಲಿ: ಕೊರಟಗರೆ ಮತ್ತು ದೊಡ್ಡಬಳ್ಳಾಪುರ ಎರಡೂ ತಾಲೂಕುಗಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಬಫರ್‌ಡ್ಯಾಮ್ ನಿರ್ವಾಣವಾಗುತ್ತಿದೆ. ಆದರೆ ದೊಡ್ಡಬಳ್ಳಾಪುರ ರೈತರ ಜಮೀನಿಗೆ ಒಂದು ಬೆಲೆ, ಕೊರಟಗೆರೆ ರೈತರ ಜಮೀನಿಗೆ ಒಂದು ಬೆಲೆ ನಿಗದಿಯಾಗಿದೆ. ಉಪನೋಂದಣಾಧಿಕಾರಿಗಳು ನೀಡಿರುವಂತಹ ದರ ಆಧಾರದಲ್ಲಿ ಬೆಲೆ ನಿಗದಿ ವಾಡದೇ ಎರಡೂ ಭಾಗದ ರೈತರಿಗೂ ಒಂದೇ ದರ ನೀಡಿ ಸಮಸ್ಯೆಯನ್ನು ಬೇಗ ಇತ್ಯರ್ಥ ವಾಡಬೇಕು ಎಂದು ಸರ್ಕಾರಕ್ಕೆ ಜಿ.ಪರಮೇಶ್ವರ್ ಒತ್ತಾಯಿಸಿದರು.

    ಕ್ರಷರ್‌ಗೆ ವಿರೋಧ : ಸಾವಿರಾರು ಎಕರೆ ರೈತರ ಜಮೀನನ್ನು ನಾಶ ವಾಡಿ ಅಭಿವೃದ್ಧಿ ವಾಡುತ್ತಿದ್ದೇವೆ ಎಂದು ತಾಲೂಕಿನ ತಂಗನಹಳ್ಳಿ ಬಳಿ ಸರ್ಕಾರದ ಹಂತದಲ್ಲಿ ಮಂಜೂರಾಗಿರುವ ಕ್ರಷರ್ ಸ್ಥಾಪನೆಗೆ ವಿರೋಧವಿದ್ದು, ನಾನು ರೈತರ ಪರವಾಗಿ ನಿಲ್ಲುತ್ತೇನೆ. ರೈತರೊಟ್ಟಿಗೆ ಹೋರಾಟ ವಾಡುತ್ತೇನೆ ಎಂದು ಶಾಸಕರು ತಿಳಿಸಿದರು. ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯ ಈರಣ್ಣ, ತಹಸೀಲ್ದಾರ್ ಗೋವಿಂದರಾಜು, ತಾಪಂ ಕಾರ‌್ಯನಿರ್ವಹಣಾಧಿಕಾರಿ ಶಿವಪ್ರಸಾದ್, ಕೃಷಿ ಅಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts