More

    ಕಾವೇರಿ: 4 ಜಲಾಶಯಗಳಿಗೆ ಸೊರಗಿದ ಒಳಹರಿವು

    ಬೆಂಗಳೂರು:
    ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಿಗೆ ಹರಿದು ಬರುತ್ತಿರುವ ಒಟ್ಟು ನೀರಿನ ಪ್ರಮಾಣ 2 ಸಾವಿರ ಕ್ಯೂಸೆಕ್‌ಗೆ ತಗ್ಗಿದೆ. ಅಷ್ಟೆ ಪ್ರಮಾಣದ ನೀರನ್ನು ತಮಿಳುನಾಡಿಗೆ ನಿತ್ಯ ಹರಿಸಲಾಗುತ್ತಿದೆ.
    ಕೆಆರ್‌ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಜಲಾಶಯಗಳಿಗೆ 40571 ಕ್ಯೂಸೆಕ್ ನೀರು ಒಳಹರಿವಿತ್ತು. ಆಗ ನಾಲ್ಕು ಡ್ಯಾಂಗಳಲ್ಲಿ 113 ಟಿಎಂಸಿ ನೀರು ಸಂಗ್ರಹವಿತ್ತು. ಈ ವರ್ಷ ಅರ್ಧದಷ್ಟು ಅಂದರೆ 65 ಟಿಎಂಸಿ ಮಾತ್ರ ಸಂಗ್ರಹವಿದೆ.
    ಜಲಾಶಯಗಳಿಂದ ಈ ತನಕ ನೀರಾವರಿ ಉದ್ದೇಶಕ್ಕೆ ಹಾಗೂ ತಮಿಳುನಾಡಿಗೆ ಹರಿಸಲು 42 ಟಿಎಂಸಿ ನೀರು ಪಡೆಯಲಾಗಿದೆ.
    ಕೆಆರ್‌ಎಸ್‌ನಲ್ಲಿ ಕಳೆದ ವರ್ಷ 49 ಟಿಎಂಸಿ ನೀರು ಸಂಗ್ರಹವಿತ್ತು. ಈ ವರ್ಷ ಕೇವಲ 23 ಟಿಎಂಸಿ ನೀರು ಸಂಗ್ರಹವಿದೆ. ಇನ್ನುಳಿದ ಜಲಾಶಯಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

    ಮೆಟ್ಟೂರು ಪರಿಸ್ಥಿತಿ:
    ತಮಿಳುನಾಡಿನ ಮೆಟ್ಟೂರು ಜಲಾಶಯ 95 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಕಳೆದ ವರ್ಷ 93 ಟಿಎಂಸಿ ನೀರಿತ್ತು. ಈ ವರ್ಷ 18 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿದೆ. ರಾಜ್ಯದಿಂದ ಹರಿಸಲಾಗುತ್ತಿರುವ ನೀರನ್ನು ಕುರುವೈ ಬೆಳೆಗೆ ಬಳಸಿಕೊಳ್ಳುತ್ತಿದೆ. ಇನ್ನು ಭವಾನಿ ಜಲಾಶಯದಲ್ಲಿ 11 ಟಿಎಂಸಿ ನೀರು ಸಂಗ್ರಹವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts