More

    ಕೆ.ಆರ್.ಸಾಗರ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು

    ಕೆ.ಆರ್.ಸಾಗರ: ಒಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸೋಮವಾರ ಮಧ್ಯಾಹ್ನ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
    ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನ ನೀರಿನ ಮಟ್ಟ 97 ಅಡಿಗೆ ತಲುಪಿದೆ. ಹಾರಂಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದು, ಲಕ್ಷ್ಮಣತೀರ್ಥ ನದಿಯಿಂದ ಕೂಡ 4 ರಿಂದ 5 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 96(ಗರಿಷ್ಠ 124.80) ಅಡಿ ಇದ್ದು, 21 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ 24 ಘಂಟೆಗಳಲ್ಲಿ ಅಣೆಕಟ್ಟೆ 6 ಅಡಿ ನೀರು ಹರಿದು ಬಂದಿದೆ. ಜಲಾಯದಿಂದ 5362 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

    ಅಣೆಕಟ್ಟೆಗೆ ಒಳಹರಿವು ಹೆಚ್ಚಳವಾಗಿರುವುದು ಮಂಡ್ಯ ಹಾಗೂ ಮೈಸೂರು ಪ್ರಾಂತ್ಯದ ರೈತರಲ್ಲಿ ಹರ್ಷ ತಂದಿದೆ. ಮೂರು ದಿನಗಳ ಹಿಂದೆ ಕಾವೇರಿ ನೀರಾವರಿ ನಿಗಮ ಮಳೆ ಕೊರತೆಯಿಂದ ರೈತರು ಹೊಸ ಬೆಳೆ ಬೆಳೆಯದಂತೆ ಪ್ರಕಟಣೆ ಹೊರಡಿಸಿದ್ದರು. ಈಗ ಉತ್ತಮ ಮಳೆಯಾಗುತ್ತಿದ್ದು, ಅಣೆಕಟ್ಟೆಯ ನೀರಿನ ಮಟ್ಟ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಹೊಸ ಬೆಳೆ ಬೆಳೆಯಲು ಸಿದ್ಧರಾಗುವ ಸೂಚನೆ ಕಂಡು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts