More

    ಕಟೀಲು ಕಾಲೇಜು ಉಪನ್ಯಾಸಕ ಪ್ರದೀಪ್ ಡಿ.ಎಂ.ಹಾವಂಜೆ ಅವರ ಮುಂಡ್ರು ಸಣ್ಣ ಕಥಾ ಸಂಕಲನ ಬಿಡುಗಡೆ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನ ಕನ್ನಡ ಉಪನ್ಯಾಸಕ, ಯುವ ಬರಹಗಾರ, ಪ್ರದೀಪ್ ಡಿ.ಎಂ.ಹಾವಂಜೆ ಅವರ ‘ಮುಂಡ್ರು’ ಸಣ್ಣ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮವು ಕಟೀಲು ಪ್ರಥಮ ದರ್ಜೆ ಕಾಲೇಜಿನ ವಾಗ್ಧೇವಿ ಸಭಾಂಗಣದಲ್ಲಿ ನಡೆಯಿತು.


    ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ. ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಕಟೀಲು ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿದರು. ಹಿರಿಯ ಸಾಹಿತಿ ಮುರುಳಿಧರ ಉಪಾಧ್ಯಾಯ,ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ದೇವು ಹನೆಹಳ್ಳಿ, ಕ್ರೀಡಾ ಭಾರತಿಯ ಅಧ್ಯಕ್ಷ ಕಾರಿಯಪ್ಪ ರೈ ಅವರನ್ನು , ಪ್ರದೀಪ್ ಡಿ.ಎಂ. ಹಾವಂಜೆ, ಚೈತ್ರ ಎಸ್.ಎಸ್, ಪುಟಾಣಿ ಆಧ್ಯಾ ಶ್ರೀ ದೇವಿಯ ಶೇಷವಸ್ತ್ರ ಸ್ಮಾರಣೆಯೊಂದಿಗೆ ಗೌರವಿಸಿದರು.


    ಮುಂಡ್ರು ಸಣ್ಣ ಕಥಾ ಸಂಕಲನದ ಮುಖಪುಟವನ್ನು ಚಿತ್ರಿಸಿದ ಚಿತ್ರಕಲಾ ಶಿಕ್ಷಕ ಉಮೇಶ್ ನೆಂತಿಕಲ್ಲು ಅವರನ್ನು ಗೌರವಿಸಲಾಯಿತು.
    ವಿದ್ಯಾರ್ಥಿನಿ ದಿಶಾ ಶೆಟ್ಟಿ ಹಾಗೂ ರಂಜನಾ ಭಟ್ ಸಾಹಿತಿ ಮತ್ತು ಲೇಖಕರ ಪರಿಚಯ ಮಾಡಿದರು. ಕಟೀಲು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ , ಸಮಾಜಸೇವಕ ಶೇಖರ್ ಹಾವಂಜೆ ,ಇಂಗ್ಲೀಷ್ ಉಪನ್ಯಾಸಕ ಪೊನ್ನಣ್ಣ , ಮಾಲತಿ, ಉಪನ್ಯಾಸಕ ರೋಹಿತ್ ಕಡಬ ಮೊದಲಾದವರು ಉಪಸ್ಥಿತರಿದ್ದರು. ಲೇಖಕ ಪ್ರದೀಪ್ ಡಿ.ಎಂ. ಹಾವಂಜೆ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಮರಾಠೆ ನಿರೂಪಿಸಿ, ವಂದಿಸಿದರು. ಲೋಕಯ್ಯ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts