More

    ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯ: ಕಟ್ಟಡ ಕಾರ್ಮಿಕರ ಪ್ರತಿಭಟನೆ

    ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಶ್ರೀರಂಗಪಟ್ಟಣ ತಾಲೂಕು ಘಟಕದ ಪದಾಧಿಕಾರಿಗಳು ಗರದಲ್ಲಿ ಪ್ರತಿಭಟನೆ ನಡೆಸಿದರು.
    ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿ ಆಗ್ರಹಿಸಿದರು. ಹಲವಾರು ವರ್ಷಗಳಿಂದ ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಯದೆ ಲಕ್ಷಾಂತರ ಕಾರ್ಮಿಕರ ಮಕ್ಕಳಿಗೆ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ, ಅರ್ಜಿ ಹಾಕಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡಬೇಕು. ಕಟ್ಟಡ ಕಾರ್ಮಿಕರು ಕಡುಬಡವರಾಗಿದ್ದು, ವಸತಿ ರಹಿತರಾಗಿದ್ದಾರೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿ ವತಿಯಿಂದ ವಸತಿ ಸೌಲಭ್ಯ ಒದಗಿಸಿಕೊಡಬೇಕು. ಗೃಹ ಸಾಲವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಳದ ಜತೆಗೆ, 2 ಲಕ್ಷ ರೂ.ಗಳನ್ನು ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
    ಟೂಲ್ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯವರು ತಮಗೆ ಬೇಕಾದವರಿಗೆ ಮಾತ್ರ ವಿತರಿಸಿದ್ದು, ಎಲ್ಲ ನೋಂದಾಯಿತ ಕಾರ್ಮಿಕರಿಗೂ ಕೂಡಲೇ ವಿತರಿಸಬೇಕು. ಕಟ್ಟಡ ಕಾರ್ಮಿಕರು ಬಡವರಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವವರಿಗೆ ಕ್ಯಾಸ್‌ಲೆಸ್ ಆರೋಗ್ಯದ ಕಾರ್ಡ್ ನೀಡಬೇಕು. ಸಂಘಟನೆಗೆ ಪ್ರತ್ಯೇಕವಾಗಿ ಪಾಸ್ ವರ್ಡ್ ನೀಡಿ, ಹೊಸ ಕಾರ್ಡ್‌ಗಳನ್ನು ಮಾಡಲು ಅನುವು ಮಾಡಿಕೊಡಬೇಕು. 60 ವರ್ಷ ಮೀರಿದ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ವೆಚ್ಚ ಮರುಪಾವತಿ ಹಾಗೂ ಮರಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೆಂಚೇಗೌಡ, ಕಾರ್ಯದರ್ಶಿ ನಿಂಗರಾಜು, ಸಹ ಸಂಚಾಲಕ ರಾಜು, ರಾಜ್ಯ ಕಾರ್ಯದರ್ಶಿ ವಾಸುದೇವ್, ಸಹ ಸಂಚಾಲಕಿ ಮಂಗಳಮ್ಮ, ಕಾರ್ಯದರ್ಶಿ ದೀಪು, ಹೋಬಳಿ ಅಧ್ಯಕ್ಷ ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts