More

    ನಿಸರ್ಗ ಬಡಾವಣೆಯ ಗಣಪತಿ, ನಾಗದೇವತಾ ಮಂದಿರದಲ್ಲಿ ಕಾರ್ತಿಕೋತ್ಸವ

    ಗದಗ: ಕಾರ್ತಿಕೋತ್ಸವ ಬೆಳಕಿನ ಸಂಕೇತವಾಗಿದ್ದು ಅಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ ಭಕ್ತಿ ಸಮರ್ಪಣಾ ಭಾವದಿಂದ ಪಾಲ್ಗೊಳ್ಳುವುದರಿಂದ ಅದು ದೇವರಿಗೆ ಸಲ್ಲುತ್ತದೆ ಎಂದು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದಂತ  ಶ್ರೀ ಷ ಬ್ರ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ ಅಡ್ನೂರ ರಾಜೂರ ಅವರು ಹೇಳಿದರು .
    ನಿಸರ್ಗ ಬಡಾವಣೆಯ ಶ್ರೀ ಗಣಪತಿ ಹಾಗೂ ನಾಗದೇವತ ಮಂದಿರದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ದಾನಿಗಳಿಗೆ ಸನ್ಮಾನ ಮಾಡಿ ಅವರು ಆಶೀರ್ವಚನ ನೀಡುತ್ತಾ ಸಮಿತಿಯ  ಎಲ್ಲ ಸದಸ್ಯರು ಒಗ್ಗೂಡಿ ಸಂಘಟಿಕರಾಗಿ ಅನೇಕ  ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರುತ್ತಿರುವುದು ಸಂತೋಷದಾಯಕ ಸಂಗತಿ ಆಗಿದೆ ಎಂದು ಅವರು ಹೇಳಿದರು.
    ಮುಖ್ಯ ಅತಿಥಿಗಳಾಗಿ ಹೊಳೆಯಲು ಕಾಲೇಜಿನ ನಿವೃತ್ತ ಉಪನ್ಯಾಸಕ ಎನ್ ಎಸ್ ಹುಣಸಿಕಟ್ಟಿ ಅವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತಿದ್ದ ಇಂಥ ಸತ್ಸಂಗ ಕಾರ್ಯಕ್ರಮಗಳಿಂದ ಸಾಂಸ್ಕೃತಿಕ ವೈಭವವನ್ನು ಕಾಣಬಹುದಾಗಿದೆ ಎಂದು ಅವರು ಹೇಳಿದರು.

    ಪ್ರಾರಂಭದಲ್ಲಿ ಸಂಗೀತಗಾರರಾದ ಕುಬೇರಪ್ಪ ನಡುವಿನಮನಿ ಹಾಗೂ ತಂಡದವರು ಸುಸ್ರಾಯವಾಗಿ ಪ್ರಾರ್ಥನೆ ಗೈದರು, ಸಮಿತಿಯ ಕಾರ್ಯದರ್ಶಿ ಆರ್ ಎಸ್ ಪಾಟೀಲ್  ಸ್ವಾಗತ, ಸಹ ಕಾರ್ಯದರ್ಶಿ ಯು ಎಂ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, 

    ಇದೇ ಸಂದರ್ಭದಲ್ಲಿ ಆರ್ ಎಸ್ ಪಾಟೀಲ್, ವಾ ಎಂ ಹಂಪಣ್ಣವರ ,ಡಿ ಎಫ್ ಕುಂಬಾರ್ ಎಂ ಎಂ ಕುಂಬಾರ್, ಗುರುರಾಜ್ ವಸ್ತ್ರದ್, ಕಪ್ಪತ್ನ ನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷರಾದ ಶ್ರೀ ಕೇಶವ ರಾಮ್ ಕೊಳ್ಳಿ ಅವರು ಮಾತನಾಡಿದರು. ಉಪಾಧ್ಯಕ್ಷರಾದ ವೈ ಬಿ ಅಮರಗೋಳ,  ಖಜಾಂಚಿ ಜಿ ಎನ್ ಸಾಲಿಮಠ, ಎ ಎಸ್ ಪಾಟೀಲ.  , ಬಿ ಎಸ್ ಮಳಿಮಠ , ಬಿ ಎಲ್ ಪಾಟೀಲ್, ಎಸ್ ಎನ್ ಮಡಿವಾಳರ್, ಎಸ್ ಆರ್ ಮಿಸ್ಕಿನ್, ಶ್ರೀಮತಿ ಲತಾ ಬಿ ಕಾಲವಾಡ, ಶ್ರೀಮತಿ ಸವಿತಾ ಪೂಜಾರ್,  ಭೀಮಸಿ ಹುಬ್ಬಳ್ಳಿಕರ್, ಎಚ್‍ ಡಿ ಬ್ಯಾಳಿ , ಗವಿಸಿದ್ದಪ್ಪ ಚಟ್ಟಿ.  ಶಿವಾನಂದ್ ಬೆನಾಳ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts