More

    ನದಿಗಳಿಗಿದೆ ಕಷ್ಟ ಕಳೆಯುವ ಶಕ್ತಿ

    ರಾಯಚೂರು: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರಿಂದ ಅಜ್ಞಾನದ ಕತ್ತಲೆ ಕಳೆಯಲಿದ್ದು, ಬದುಕಿನಲ್ಲಿ ಸಮೃದ್ಧಿ ದೊರೆಯುತ್ತದೆ. ಹೀಗಾಗಿ ಕಾರ್ತಿಕ ಮಾಸಕ್ಕೆ ತನ್ನದೆ ವೈಶಿಷ್ಟೃ ಸ್ಥಾನವಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

    ದೀಪ ಬೆಳಗಿಸುವುದರಿಂದ ಅಜ್ಞಾನ ಕಳೆಯಲಿದೆ

    ಮಂತ್ರಾಲಯದ ತುಂಗಭದ್ರಾ ನದಿ ತೀರದಲ್ಲಿ ಶ್ರೀಮಠದಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ತುಂಗಾರತಿ ಕಾರ್ಯಕ್ರಮದ ನಿಮಿತ್ತ ನದಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ನದಿಗಳು ಮಾನವನ ಪ್ರಗತಿಗೆ ಸಹಕಾರಿಯಾಗಿದ್ದು, ಮನುಷ್ಯನ ಕಷ್ಟಗಳನ್ನು ಕಳೆಯುವ ಶಕ್ತಿಯಿದೆ ಎಂದರು.
    ಇದಕ್ಕೂ ಮೊದಲು ಉತ್ಸವ ಮೂರ್ತಿ ಪ್ರಹ್ಲಾದರಾಜರನ್ನು ಶ್ರೀಮಠದಿಂದ ತುಂಗಭದ್ರಾ ನದಿ ತೀರಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು. ಶ್ರೀಗಳು ನದಿಗೆ ವಿಶೇಷ ಪೂಜೆ ಆರತಿ ನೆರವೇರಿಸಿದರು.

    ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್: ಹಾರ್ದಿಕ್​ ಪಾಂಡ್ಯರ ಮೊದಲ ಪ್ರತಿಕ್ರಿಯೆ ಹೀಗಿದೆ…​

    ಈ ಸಂದರ್ಭ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾಚಾರ್, ಆಡಳಿತಾಕಾರಿ ವೆಂಕಟೇಶ ಜೋಷಿ, ವಿದ್ವಾನ್ ಡಾ.ಎನ್.ವಾದಿರಾಜಾಚಾರ್, ಭಕ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts