More

    ಮಕ್ಕಳಿಗೆ ದೇಶದ ಸಂಸ್ಕೃತಿ-ಪರಂಪರೆ ತಿಳಿಸಿ

    ಚಿಂಚೋಳಿ: ಪುರುಷೋತ್ತಮ ಶ್ರೀರಾಮ ಹಾಗೂ ಶಿವ ಮಂದಿರಗಳಲ್ಲಿ ಕಾರ್ತಿಕ ದೀಪೋತ್ಸವ ಆಚರಿಸಿದ ಭಕ್ತಗಣವೇ ಧನ್ಯರು ಎಂದು ನಿಡಗುಂದಾ ಕಂಚಾಳಕುಂಠಿ ಮಠದ ಪೀಠಾಧಿಪತಿ ಶ್ರೀ ಕರುಣೇಶ್ವರ ಶಿವಾಚಾರ್ಯರು ನುಡಿದರು.

    ಚಂದಾಪುರದ ರಾಮ ನಗರದಲ್ಲಿನ ಶ್ರೀ ರಾಮ ಹಾಗೂ ಶಿವ ಮಂದಿರಗಳಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಹೊರಗಿನ ಮೋಹ ಮರೆತು, ಅಂತರಾತ್ಮದ ಜ್ಯೋತಿ ಅರಿತು ಯೋಗ- ಧ್ಯಾನದಲ್ಲಿ ನಿರತರಾಗಬೇಕು. ಮಕ್ಕಳಿಗೆ ದೇಶದ ಸಂಸ್ಕೃತಿ-ಪರಂಪರೆಯನ್ನು ತಿಳಿಸಬೇಕು ಎಂದರು.

    ಚಂದನಕೇರಾದ ಶ್ರೀ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಚಿತ್ರಶೇಖರ ಪಾಟೀಲ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ನರಸಮ್ಮ ಅವಂಟಿ, ಶಿವಪ್ರಸಾದ ಪಿ.ಜಿ., ಜಗನ್ನಾಥ ಶೇರಿಕಾರ ಮಾತನಾಡಿದರು.

    ಕಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಪುರಸಭೆ ಸದಸ್ಯೆ ರಾಧಾಬಾಯಿ ಓಲಗೇರಿ, ಪ್ರಮುಖರಾದ ಗಿರಿರಾಜ ಸಜ್ಜನ್, ವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ರಾಚೋಟ್ಟಿ, ಮಲ್ಲಿನಾಥ ಸುನಗಮಠ, ಮಾಣಿಕರಾವ, ನಾಗೇಂದ್ರ ಬಡಿಗೇರಾ, ದಿಲೀಪ್ ಚವ್ಹಾಣ್, ನಂದಿನಿ ಓಲಗೇರಿ, ಶಿವಪ್ರಸಾದ ಪಾರಾ, ಶಿವಶಂಕರ ಶಿವಪುರಿ, ಶರಣಯ್ಯ ಸ್ವಾಮಿ, ಶಾಂತಕುಮಾರ ಯಂಪಳ್ಳಿ, ಚಂದ್ರಕಾಂತ ಮಲಸಾ, ಅವಿನಾಶ ಗೋಸುಲ್, ಪ್ರಭು ಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts