More

    ಭಾರಿ ಮಳೆಯ ಹಿನ್ನೆಲೆ ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಈ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದೆಯಾ ನೋಡಿ

    ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಈ 5 ಜಿಲ್ಲೆಗಳಿಗೆ ಸದ್ಯ ಆರೆಂಜ್ ಅಲರ್ಟ್​​ ಘೋಷಿಸಿದೆ.

    ಇದನ್ನೂ ಓದಿ: ಹನಿಮೂನ್ ಪೀರಿಯಡ್​ನಲ್ಲೇ ಹೀಗಾದರೆ ಮುಂದಿನ ಕಥೆ ಏನು: ಎಚ್​.ಡಿ. ಕುಮಾರಸ್ವಾಮಿ

    ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಕಳೆದ ಎರಡು ದಿನಗಳಿಂದ ಈ ಭಾಗಗಳಲ್ಲಿ ಹಲವೆಡೆ ಮಳೆಯಾಗಿದೆ. ಇಂದು ಕೂಡ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಂದಿನ ವರದಿಯಲ್ಲಿ ಉಲ್ಲೇಖಿಸಿದೆ. ರಾಜ್ಯದ 5 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

    ಗುಡುಗು, ಮಿಂಚು, ಸಹಿತ ಗಾಳಿ ಮಳೆಯಾಗಲಿದ್ದು, ಕೊಡಗು, ದಾವಣಗೆರೆ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಸೂಚನೆ ನೀಡಿದೆ. ಇಂದು ಮಧ್ಯರಾತ್ರಿಯಿಂದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಎಂದಿನಂತೆ ಸಾಧಾರಣ ಮಳೆ ಸಾಧ್ಯತೆಯಿದ್ದು, ಮೋಡಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಇಂದಿನ ವರದಿಯಲ್ಲಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts