More

    ಕರ್ನಾಟಕ ಖಾಸಗಿ ಶಾಲೆಗಳ ಪಠ್ಯ ಪುಸ್ತಕದ ಬೆಲೆ ಶೇಕಡ 25ರಷ್ಟು ಏರಿಕೆ!

    ಬೆಂಗಳೂರು: ಶಾಲೆಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಪೂರೈಸುವ ಪುಸ್ತಕ ಬೆಲೆ ಶೇಕಡ 25ರಷ್ಟು ಏರಿಕೆ ಮಾಡಲಾಗಿದ್ದು, ಪೋಷಕರಿಗೆ ಮತ್ತಷ್ಟು ಹೊರೆಯಾಗಲಿದೆ. 19000 ಖಾಸಗಿ ಶಾಲೆ-ಕಾಲೇಜುಗಳ 52 ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗಲಿದೆ.

    ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳ ಮಕ್ಕಳಿಗೆ ಸರ್ಕಾರದಿಂದ ಪಠ್ಯಪುಸ್ತಕ ಪೂರೈಕೆ ಮಾಡಲಿದ್ದು, ಈ ಪುಸ್ತಕಗಳ ಬೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶೇಕಡ 25ರಷ್ಟು ಹೆಚ್ಚಳ ಆಗಲಿದೆ. 2023 -24ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳಿಗೆ ಕಳೆದ ವರ್ಷಕ್ಕಿಂತ ಶೇಕಡ 20 ರಿಂದ 25 ರಷ್ಟು ದರ ಹೆಚ್ಚಳ ಮಾಡಲಾಗಿದೆ.

    ಕಳೆದ ವರ್ಷ 46 ರೂಪಾಯಿ ಇದ್ದ ಗಣಿತ ಭಾಗ -2 ಪುಸ್ತಕದ ಮಾರಾಟ ಬೆಲೆ 60 ರೂಪಾಯಿಗೆ ಏರಿಕೆಯಾಗಿದೆ. ಬೆಲೆ ಏರಿಕೆ ಮತ್ತು ಜಿ.ಎಸ್.ಟಿ. ಕಾರಣದಿಂದ ಪಠ್ಯಪುಸ್ತಕ ದರ ಹೆಚ್ಚಳವಾಗಿದೆ. ಕಾಗದದ ಬೆಲೆ, ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: 100ಕ್ಕೂ ಹೆಚ್ಚು ಬಾರಿ ಇರಿದು ಈತನ ಕಥೆ ಮುಗಿಸಿದ್ರು!

    ಕರ್ನಾಟಕ ರಾಜ್ಯ ಪಠ್ಯಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಸತ್ಯಕುಮಾರ್ ಮಾತನಾಡಿ, ‘ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಕಾಗದದ ಕೊರತೆಯಿದೆ. ಹೀಗಾಗಿ ಕಾಗದದ ಬೆಲೆ 65% ರಷ್ಟು ಏರಿಕೆಯಾಗಿದೆ. ಅದೇ ರೀತಿ, ಜಿಎಸ್​ಟಿಯಲ್ಲಿ ಕೂಡ 12% ರಿಂದ 18%ರಷ್ಟು ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಅದು ಕೇವಲ 5% ಆಗಿತ್ತು’ ಎಂದು ಹೇಳಿದ್ದಾರೆ.

    ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ 10ರೂ. ನೀಡಿದ 60 ವರ್ಷದ ಅಜ್ಜ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts