More

    ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ 14 ಕೋಟಿ ರೂ. ನಿವ್ವಳ ಲಾಭ: ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ಹೇಳಿಕೆ

    ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಒಟ್ಟು ವ್ಯವಹಾರದ ಮೊತ್ತ 55 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ದಕ್ಷಿಣ ಭಾರತದ ದೊಡ್ಡ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ಹೇಳಿದರು.

    ನಗರದ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 44 ವರ್ಷಗಳಿಂದ ನಿರಂತರವಾಗಿ ಲಾಭದತ್ತ ಬ್ಯಾಂಕ್ ಸಾಗಿದೆ. ಈ ವರ್ಷ 723 ಕೋಟಿ ರೂ. ಪೈಕಿ 14 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದರ ಜತೆ 3,478 ಕೋಟಿ ರೂ. ಆದಾಯ ಗಳಿಸಿದ್ದು, ಶೇ.7.58 ಬೆಳವಣಿಗೆ ಕಂಡಿದೆ. ಬ್ಯಾಂಕಿನ ಠೇವಣಿ ಕಳೆದ ವರ್ಷದ ಸಾಧನೆಯಾದ 28 ಸಾವಿರ ಕೋಟಿ ರೂ. ಮೀರಿ, ಅಂದರೆ 31 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಶೇ.9.26 ಉತ್ತಮ ಬೆಳವಣಿಗೆ ಸಾಧಿಸಿದೆ ಎಂದರು.

    ಕೃಷಿ ವಲಯದಲ್ಲಿ ಶೇ.17.97 ಬೆಳವಣಿಗೆ ಸಾಧಿಸಿದ್ದು, ಹೊಸತಾಗಿ 9 ಸಾವಿರ ಕೋಟಿ ರೂ. ಸಾಲ ವಿತರಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಶೇ.35.90, ಬಂಗಾರದ ಆಭರಣಗಳ ಮೇಲಿನ ಸಾಲ ವಿಭಾಗದಲ್ಲಿ ಶೇ.53.73 ಸಾಧನೆಗೈದಿದೆ. ಕೋವಿಡ್‌ನಿಂದಾಗಿ ಹೊಸ ಯೋಜನೆಗಳನ್ನು ಹೊರತಂದಿದ್ದು, 36,867 ರೈತರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ 86.33 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ 5876 ಬೀದಿ ಬದಿ ವ್ಯಾಪಾರಿಗಳಿಗೆ 5.87 ಕೋಟಿ ರೂ. ಸಾಲ ವಿತರಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 62 ಸಾವಿರ ಕೋಟಿ ರೂ. ವ್ಯವಹಾರದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಜನರಲ್ ಮ್ಯಾನೇಜರ್‌ಗಳಾದ ಜಿ.ಪ್ರದೀಪ್ ವರ್ಮ, ಎ.ಎನ್.ಪ್ರಸಾದ್, ಎ.ಪಿ.ಹೇಮಾದ್ರಿ, ನಿಂಗೇಗೌಡ ಇದ್ದರು.

    ಕೋವಿಡ್ ಸಂಕಷ್ಟದಲ್ಲಿ ಸಹಾಯ
    ಕರೊನಾ ಸಂದರ್ಭ ಬ್ಯಾಂಕ್ ಸಿಬ್ಬಂದಿಯ ಒಂದು ದಿನದ ವೇತನವಾದ 85 ಲಕ್ಷ ರೂ.ಗಳನ್ನು ಸಿಎಂ ಮತ್ತು ಪಿಎಂ ಕೇರ್ಸ್‌ ಫಂಡ್‌ಗೆ ದೇಣಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಎರಡು ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಒಂದು ಮತ್ತು ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟ ಬ್ಯಾಂಕ್‌ನ 14 ಸಿಬ್ಬಂದಿ ಕುಟುಂಬಸ್ಥರಿಗೆ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು 274 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ರೈತರು ಪಡೆದ ಸಾಲವನ್ನು ಒಂದೇ ಕಂತಿನಲ್ಲಿ ಒನ್ ಟೈಮ್ ಸೆಟಲ್‌ಮೆಂಟ್‌ನಲ್ಲಿ ಪಾವತಿಸಿದರೆ ಕನಿಷ್ಠ ಶೇ.25ವರೆಗೆ ರಿಯಾಯಿತಿ ನೀಡುವುದರ ಜತೆಗೆ ಮತ್ತೆ ಸಾಲ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts