More

    ಮಾರಕ ವೈರಸ್​ ಕೊರೊನಾ ಭೀತಿ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಶಾಲೆಗಳಿಗೆ ಸೂಚನೆ

    ಬೆಂಗಳೂರು: ಮಾರಕ ವೈರಸ್​ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ರಾಜ್ಯದ ಪ್ರಾಥಮಿಕ ಶಾಲೆಗಳ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳನ್ನು ಶೀಘ್ರ ಆರಂಭಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಎಸ್​ಎಸ್​ಎಲ್​ಸಿ ಹೊರತು ಪಡಿಸಿ 1ರಿಂದ 9ನೇ ತರಗತಿವರೆಗ ಪರೀಕ್ಷೆಗಳನ್ನು ನಡೆಸಲು ದಿನಾಂಕವನ್ನು ಸುತ್ತೋಲೆಯಲ್ಲಿ ನಿಗದಿ ಪಡಿಸಿದೆ. ಅದರಂತೆ 1 ರಿಂದ 6ನೇ ತರಗತಿಯ ಪರೀಕ್ಷೆಗಳನ್ನು 10-3-2020 ರಿಂದ 16-03-2020 ರವರಿಗೆ ಪೂರ್ಣಗೊಳಿಸಿ ಎಂದು ತಿಳಿಸಿದೆ.

    ಇನ್ನು 7 ನೇ ತರಗತಿಯ ಪರೀಕ್ಷೆಗಳು ನೀಡಲಾದ ವೇಳಾಪಟ್ಟಿಯಂತೆ 16-03-2020 ರಿಂದ 21-03-2020 ರವರಿಗೆ ನಡೆಸಬೇಕು. 8 ಹಾಗೂ 9 ನೇ ತರಗತಿಯ ಪರೀಕ್ಷೆಗಳನ್ನು ದಿನಾಂಕ: 16-03-2020 ರಿಂದ 23-03-2020 ರವರಿಗೆ ನಡೆಸುವುದು ಎಂದು ಸೂಚಿಸಲಾಗಿದೆ.

    ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರವಾನಿಸಿದ್ದಾರೆ.

    ಈಗ ತಿಳಿಸಿದ ವೇಳಾಪಟ್ಟಿಯಂತೆ ಕಡ್ಡಾಯವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಬಿ.ಎಚ್​. ಗೋನಾಳ್ ಸೂಚಿಸಿದ್ದಾರೆ.

    ನರ್ಸರಿ, ಎಲ್​ಕೆಜಿ, ಯುಕೆಜಿಗೆ ಇಂದಿನಿಂದ ಮುಂದಿನ ಆದೇಶದವರೆಗೆ ರಜೆ; ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts