More

    ಕರ್ನಾಟಕದ ಅಭಿವೃದ್ಧಿಗಾಗಿ ತಪ್ಪದೇ ಮತದಾನ ಮಾಡಿ

    ಹನುಮಸಾಗರ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವೀಪ್ ತಂಡದಿಂದ ಮತದಾನ ಜಾಗೃತಿ ಹಾಗೂ ಚುನಾವಣೆ ಆಯೋಗದ ಧ್ವಜ ಅನಾವರಣ ನೆರೆವೇರಿಸಲಾಯಿತು.

    ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ ರಾಠೋಡ ಮಾತನಾಡಿ, ರಾಜ್ಯದ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಆಸೆ ಆಮೀಷಕ್ಕೆ ಬಲಿಯಾಗದೆ ನಿರ್ಭೀತಿಯಿಂದ ತಪ್ಪದೇ ಮತದಾನ ಮಾಡಬೇಕು.

    ನಿಮ್ಮ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ನಿಮ್ಮ ಮತಕ್ಕೆ ಭಾರತಕ್ಕೆ ಒಬ್ಬ ಉತ್ತಮ ನಾಯಕನನ್ನು ನೀಡುವ ಶಕ್ತಿ ಇದ್ದು, ಎಲ್ಲರೂ ತಪ್ಪದೇ ಹಕ್ಕು ಚಲಾಯಿಸಬೇಕು ಎಂದರು.

    ಇದನ್ನೂ ಓದಿ: ಕರ್ನಾಟಕವನ್ನು ನಂ.​ 1 ಮಾಡುವ ಚುನಾವಣೆ ಇದಾಗಿದೆ: ಬೀದರ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

    ಪಿಡಿಒ ದೇವೇಂದ್ರಪ್ಪ ಕಮತರ, ಎಸ್‌ಡಿಎ ವೀರನಗೌಡ ಪಾಟೀಲ್, ನರೇಗಾ ಇಂಜಿನಿಯರ್ ಪ್ರಕಾಶ ಸಜ್ಜನ, ಬಿಎಫ್‌ಟಿ ಮಾರುತಿ ಸಾಳುಂಕಿ, ಸಂಜೀವಿನಿ ಒಕ್ಕೂಟದ ಶಕುಂತಲಾ ಹಲಕೋಲಿ, ಗ್ರಾಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ, ವೀರೇಶ ಕೂರ್ನಾಳ, ಬಸವರಾಜ ಶಿವಸಿಂಪಿ, ಚಂದಯ್ಯ ಹಿರೇಮಠ ಇತರರಿದ್ದರು.

    ಇಲ್ಲಿನ ಬನಶಂಕರಿ ದೇವಸ್ಥಾನ ಬಳಿ ಜ್ಞಾನಸಂಗಮ ವಿವಿದೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ರಾಯಲ್ ಸೋಶಿಯಲ್ ಫೌಂಡೇಷನ್‌ನಿಂದ ಮತದಾನ ಜಾಗೃತಿ ಅಭಿಯಾನ ನಡೆಯಿತು.

    ಸಂಸ್ಥೆಯ ವಸಂತಕುಮಾರ ಸಿನ್ನೂರ, ಖಾಜೇಸಾಬ್ ಮುದಗಲ್, ಪ್ರಮುಖರಾದ ಶಂಕ್ರಪ್ಪ ಸಿನ್ನೂರ, ವೀರಪ್ಪ ಸಿನ್ನೂರ, ಶ್ರೀನಿವಾಸ ಸಿನ್ನೂರ, ಬಸವರಾಜ ಸಿನ್ನೂರ, ಶಂಕರ ಹುಲಮನಿ, ವಿಶಾಲ ಸಿನ್ನೂರ, ದುರಗೇಶ ಮಡಿವಾಳರ, ಮಹೇಶ ಹುಲಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts