More

    ಸ್ಮಾರಕಗಳ ಜಾಗ ಒತ್ತುವರಿಗೆ ಆಕ್ರೋಶ

    ರಾಯಚೂರು: ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಬಹುಮಹಡಿಗಳ ಕಟ್ಟಡಗಳನ್ನು ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

    ಅನಧಿಕೃತ ಕಟ್ಟಡಗಳು ನೆಲಸಮಗೊಳಿಸಿ

    ನಗರದ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಥಳವಾದ ಬಫರ್‌ಜೋನ್ ಮತ್ತು ಕೋಟೆ ಪಕ್ಕದ ಕಂದಕ ಜಾಗದಲ್ಲಿ ಬರುವ ಮಹಾತ್ಮ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಕರೂರ್ ವೈಶ್ಯ ಬ್ಯಾಂಕ್, ಇತರೆ ಅಪಾರ್ಟ್‌ಮೆಂಟ್, ವಾಣಿಜ್ಯ ಮಳಿಗೆಗಳು, ಎಸ್‌ಎನ್‌ಟಿ ಮತ್ತು ಮಿನಿ ಟಾಕೀಸ್ ಕಟ್ಟಡಗಳ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಲ್ಲಿ ಬೃಹತ್ ಮಟ್ಟದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದೆ. ಕಂದಕ ಒತ್ತುವರಿ ಮಾಡಿಕೊಂಡು ಮಳಿಗೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ನವರಂಗ ದರವಾಜ್ ಅಕ್ಕಪಕ್ಕದ ಮನೆಗಳು ಮತ್ತು ಮಳಿಗೆಗಳು, ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಕೊಹ್ಲಿಯಿಂದ ಸಾಧ್ಯಾನೇ ಇಲ್ಲ! ಅಚ್ಚರಿಯ ಹೇಳಿಕೆ ನೀಡಿದ ವಿಂಡೀಸ್​ ಕ್ರಿಕೆಟ್​ ದಿಗ್ಗಜ ಲಾರಾ

    ಕಂದಕದ ಬಳಿ ಕಟ್ಟಡಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಕೋಟೆ ಐತಿಹಾಸಿಕ ಸ್ಥಳ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಒತ್ತುವರಿಯಾದ ಜಾಗ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರತತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯ್ದೆ ಪ್ರಕಾರ ನಿಷೇಧ ಪ್ರದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕು. ಕಾನೂನು ಬಾಹಿರವಾಗಿ ನಗರಸಭೆಯಿಂದ ನೀಡಿದ ಪರವಾನಗಿ ತನಿಖೆ ಮಾಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒತ್ತುವರಿ ಮಾಡಿಕೊಂಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ, ಸರ್ಕಾರಿ ಪುರಾತತ್ವ ಜಾಗವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts