More

    ಬೆಂಗಳೂರಿನ 2 ಸಾವಿರ ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಸಿಟಿ! ಸಿಎಂ ಬೊಮ್ಮಾಯಿ ಘೋಷಣೆ…

    ಬೆಂಗಳೂರು: ಬೆಂಗಳೂರಿನಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್ ಸಿಟಿ’ ಮಾಡಬೇಕೆಂಬ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ‘ಬೆಂಗಳೂರು ನಗರ ವಿಶ್ವವಿದ್ಯಾಲಯದ ನವೀಕೃತ ಆವರಣ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲ ದೇಶದ ಉತ್ತಮ ವಿವಿಗಳು ಅಲ್ಲಿಗೆ ಬರಬೇಕು. ವಿದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶವಿಲ್ಲದ ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಹಾರ್ವರ್ಡ್ ವಿವಿ, ಐಐಟಿ ಗಳನ್ನು ಅಲ್ಲಿಗೆ ತರುವ ಮೂಲಕ ವಿದ್ಯಾರ್ಥಿಗಳು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುವಂತಾಗಬೇಕು ಎಂದರು.

    ‘ಬೆಂಗಳೂರು ಶಿಕ್ಷಣ ಜಿಲ್ಲೆ’ಯಾಗಿ ಘೋಷಣೆ:

    ಸಿಟಿ ವಿಶ್ವವಿದ್ಯಾಲಯವು ಲಂಡನ್ನಿನ ಸಿಟಿ ವಿಶ್ವವಿದ್ಯಾಲಯಕ್ಕಿಂತ ಒಂದು ಪಟ್ಟು ಹೆಚ್ಚಿದೆ. ಸೆಂಟ್ರಲ್ ಕಾಲೇಜು ಇರುವ ಭಾಗದಲ್ಲಿ ಹಲವು ವಿವಿಗಳಿವೆ. ಆದ್ದರಿಂದ ‘ಬೆಂಗಳೂರು ಶಿಕ್ಷಣ ಜಿಲ್ಲೆ’ಯಾಗಿ ೋಷಿಸುತ್ತಿದ್ದೇವೆ ಎಂದರು.

    ಇಡೀ ವಿಶ್ವದಲ್ಲಿಯೇ ಒಂದೇ ಕಡೆ ಇಷ್ಟು ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳಿಲ್ಲ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ. ಇದು ಯಶಸ್ವಿಯಾದಲ್ಲಿ ಹಲವು ಕಡೆ ಶಿಕ್ಷಣ ಜಿಲ್ಲೆಯನ್ನು ೋಷಿಸಲಾಗುವುದು ಎಂದು ಹೇಳಿದರು.

    ಈ ಯೋಜನೆ ಯಶಸ್ವಿಯಾದರೆ ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಜಗತ್ತಿನಲ್ಲಿಯೇ ಅತ್ತುತ್ತಮ ಶಿಕ್ಷಣ ನೀತಿಯಾಗಿದೆ.  ಎನ್‌ಇಪಿ ಯಲ್ಲಿ ಬಹುಶಿಸ್ತೀಯ ಶಿಕ್ಷಣ ಅಳವಡಿಕೆ. ಒಂದೇ ಸಮಯದಲ್ಲಿ ಡಬಲ್ ಡಿಗ್ರಿ ಸೇರಿ ವಿವಿಧ ಅನುಕೂಲಗಳಿವೆ ಎಂದರು.

    ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ನೊಬೆಲ್ ಪುರಷ್ಕೃತ ಸಿ.ವಿ. ರಾಮನ್, ಭಾರತರತ್ನ ರಾಜಗೋಪಾಲಚಾರಿ, ಸರ್.ಎಂ. ವಿಶ್ವೇಶ್ವರಯ್ಯ ಅಂತಹ ದಂತಕತೆಗಳಿದ್ದ ಸೆಂಟ್ರಲ್ ಕಾಲೇಜು (ನಗರ ವಿವಿ) ದೇಶದ ನಂ.1 ವಿಶ್ವವಿದ್ಯಾಲಯವಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನಗಳಲ್ಲಿ ಕರ್ನಾಟಕ ಮತ್ತು ಬೆಂಗಳೂರು ವಿವಿಧ ಕ್ಷೇತ್ರಗಳಲ್ಲಿ ನಂ.1 ಇದೆ. ಅದೇ ರೀತಿ ಮಹಾನ್ ವ್ಯಕ್ತಿಗಳು ವ್ಯಾಸಂಗ, ಬೋಧನೆ ಮಾಡಿರುವ ಈ ಪುಣ್ಯಭೂಮಿಯಲ್ಲಿರುವ ವಿವಿ ಕೂಡ ನಂ.1 ಆಗಬೇಕು ಎಂದರು.

    ಬೆಂಗಳೂರು ನಗರವು ನವೋದ್ಯಮ, ಆವಿಷ್ಕಾರ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಇದನ್ನು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಳ್ಳುವ ಮೂಲಕ ಸಾಧನೆ ಮಾಡುವಂತೆ ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಕುಲಸಚಿವ ಸಿ.ಎನ್. ಶ್ರೀಧರ್, ಮೌಲ್ಯಮಾಪನ ಕುಲಸಚಿವ ಡಾ. ವಿ. ಲೋಕೇಶ, ವಿಶ್ರಾಂತ ಕುಲಪತಿ ಪ್ರೊ. ಎಸ್. ಾಟ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಪ್ರೊ. ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

    ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ವಿವಿ ಕುಲಪತಿ, ಪ್ರೊ. ಲಿಂಗರಾಜ ಗಾಂಧಿ, ‘ಬರ್ಮಿಂಗ್‌ಹ್ಯಾಮ್ ವಿವಿ ಸೇರಿ ವಿವಿಧ 8 ವಿದೇಶಿ ವಿವಿ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬೆಂಗಳುರು ನಗರ ವಿವಿ ಯು ಬಹುಶಿಸ್ತೀಯ ಕಲಿಕೆ ಮತ್ತು ವಿದ್ಯಾರ್ಥಿಸ್ವೇಹಿಯಾಗಿ ಕಲಿಯುವ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts