More

    ಶಿಕ್ಷಕರ ವರ್ಗಾವಣೆ ಮ್ಯಾನ್ಯುಯಲ್ ಕೌನ್ಸೆಲಿಂಗ್​ಗೆ ನಿಷೇಧ, ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ಸೇರಿ ಹಲವು ಅಂಶಗಳ ಮಸೂದೆ ಮಂಡನೆ

    ಬೆಂಗಳೂರು: ರಾಜ್ಯ ವಿಧಾನಸಭೆಯ ಹಾಲಿ ಅಧಿವೇಶನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ಮಂಡನೆಯಾಗಿದೆ. ಇದು ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಖಚಿತಪಡಿಸುವಂತೆ ಶಿಕ್ಷಕರ ವರ್ಗಾವಣೆಯನ್ನು ನಿಯಂತ್ರಿಸುವುದಕ್ಕಾಗಿ ಉಪಬಂಧ ಕಲ್ಪಿಸುವುದಕ್ಕಾಗಿ ಸರ್ಕಾರ ಈ ವಿಧೇಯಕವನ್ನು ಮಂಡಿಸಿದೆ.

    ವಲಯ ಸಿ ಗೆ ಶಿಕ್ಷಕನ ಕಡ್ಡಾಯ ನೇಮಕಾತಿ, ಶಿಕ್ಷಕರ ಸಮರ್ಪಕ ಮರುಹಂಚಿಕೆ, ವಲಯವಾರು ವರ್ಗಾವಣೆ, ಕೋರಿಕೆಯ ವರ್ಗಾವಣೆ, ಕೌನ್ಸೆಲಿಂಗ್ ಮೂಲಕ ವರ್ಗಾವಣೆ, ನಿರ್ದಿಷ್ಟ ಹುದ್ದೆಗಳಿಗೆ ಶಿಕ್ಷಕರ ವರ್ಗಾವಣೆ, ವರ್ಗಾವಣೆ ಸಮಯದಲ್ಲಿ ಕುಂದುಕೊರತೆಗಳ ನಿವಾರಣೆ, ಸಮರ್ಪಕ ಮರುಹಂಚಿಕೆ, ವಲಯವಅರು ವರ್ಗಾವಣೆಗಳಿಂದ ವಿನಾಯಿತಿಗಳು ಮತ್ತು ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ, ಮ್ಯಾನ್ಯುಯೆಲ್ ಕೌನ್ಸೆಲಿಂಗ್​ನ ನಿಷೇಧ ಸೇರಿ ಹಲವು ಅಂಶಗಳು ಮಸೂದೆಯಲ್ಲಿವೆ.

    ಶಿಕ್ಷಕರ ವರ್ಗಾವಣೆಯಲ್ಲಿ ಪದೇಪದೆ ಚರ್ಚೆಗೊಳಗಾಗುವ ವಲಯವಾರು ವರ್ಗಾವಣೆ ಬಗ್ಗೆ ಮಸೂದೆಯಲ್ಲಿರುವ ಅಂಶ ಇಂತಿದೆ- ವಲಯ ಸಿ ನಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿಲ್ಲದ ಮತ್ತು ವಲಯ ಎ ನಲ್ಲಿ ನಿರಂತರ 10 ವರ್ಷಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಶಿಕ್ಷಕರನ್ನೂ ಷರತ್ತುಗಳಿಗೆ ಒಳಪಟ್ಟು ವಲಯ-ಸಿ ಅಥವಾ ವಲಯ ಬಿಗೆ ವರ್ಗಾವಣೆ ಮಾಡತಕ್ಕದ್ದು.

    ಅದೇ ರೀತಿ. (i)ನೆ ಉಪಖಂಡದ ಅಡಿಯಲ್ಲಿ ವಲಯ-ಸಿಗೆ ವರ್ಗಾವಣೆಗೊಂಡ ಶಿಕ್ಷಕನ ಸ್ಥಳ ನಿಯುಕ್ತಿಗಾಗಿ ಯಾವುದೇ ಖಾಲಿ ಹುದ್ದೆ ಲಭ್ಯ ಇಲ್ಲದೇ ಹೋದರೆ, ವಲಯ ಸಿ ಅಥವಾ ವಲಯ ಬಿನಲ್ಲಿ ಕನಿಷ್ಠ ಸೇವಾವಧಿ ಪೂರೈಸಿರುವ ಮತ್ತು ವರ್ಗಾವಣೆಗೆ ಸಮ್ಮತಿಸಿರುವ ಶಿಕ್ಷಕರನ್ನು ಆದ್ಯತೆಯ ಮೇರೆಗೆ ವಲಯ-ಎ ಗೆ ವರ್ಗಾವಣೆ ಮಾಡುವ ಮೂಲಕ ಖಾಲಿ ಹುದ್ದೆ ಸೃಜಿಸಬಹುದು.

    ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಕೋರಿಕೆಯ ವರ್ಗಾವಣೆ ವಿಚಾರದ ಅಂಶಗಳೇನಿವೆ?

    ಬೆಂಗಳೂರಿನಲ್ಲಿ ಇದ್ದುಕೊಂಡೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ 19 ಕಾಂಗ್ರೆಸ್ ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts