More

    ‘ಈ ಭೂಮಿ ಮೇಲೆ ಅತ್ಯಂತ ಅದೃಷ್ಟವಂತ ನಾನೇ’: ಶಿಲ್ಪಿ ಅರುಣ್ ಯೋಗಿರಾಜ್

    ಅಯೋಧ್ಯೆ: “ಈ ಕ್ಷಣದಲ್ಲಿ ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ರಾಮಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇರಲಿ. ಒಮ್ಮೊಮ್ಮೆ ಅದೆಲ್ಲ ಕನಸಿನಂತೆ ಭಾಸವಾಗುತ್ತದೆ’ ಎಂದು ರಾಮಲಲ್ಲಾ ವಿಗ್ರಹದ ರೂಪಕರ್ತ, ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ತಿಳಿಸಿದರು.

    ಇದನ್ನೂ ಓದಿ: ಇನ್ನು ದಾರಿಗಳೆಲ್ಲ ಅಯೋಧ್ಯೆ ಕಡೆಗೆ: ವಾರ್ಷಿಕ 50 ಮಿಲಿಯನ್​ ಪ್ರಯಾಣಿಕರು!

    ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿಂತ ಅದೃಷ್ಟವಂತರು ಯಾರೂ ಇಲ್ಲ ಎನಿಸುತ್ತಿದೆ. ನಾನು ತಾಯಾರಿಸಿದ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ. ಅದನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅದಕ್ಕಿಂತ ನನಗೆ ಇನ್ನೇನು ಬೇಕಿದೆ? ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರು.

    ಮೂವರು ಶಿಲ್ಪಿಗಳು ವಿವಿಧ ಬಂಡೆಗಳಿಂದ ಶ್ರೀರಾಮನ ಶಿಲ್ಪಗಳನ್ನು ಕೆತ್ತಿದರು. ಗರ್ಭಗುಡಿಗೆ ಒಂದು ವಿಗ್ರಹವನ್ನು ಆಯ್ಕೆ ಮಾಡಿದರು. ಇದನ್ನು ನಮ್ಮ ಕರ್ನಾಟಕದ ಯೋಗಿರಾಜ್ ಕೆತ್ತಿದ್ದಾರೆ. ಉಳಿದವುಗಳನ್ನು ದೇವಾಲಯದ ಇತರ ಭಾಗಗಳಲ್ಲಿ ಇರಿಸಲಾಗಿದೆ. ಭಕ್ತರಿಂದ ರಾಮಲಲ್ಲಾ ಎಂದು ಕರೆಯಲ್ಪಡುವ ಈ 51 ಇಂಚು ಎತ್ತರದ (ಸುಮಾರು 4.25 ಅಡಿ) ರಾಮನ ವಿಗ್ರಹವನ್ನು ಆಕರ್ಷಕ ಕೃಷ್ಣ ಕಲ್ಲಿನಿಂದ ಕೆತ್ತಲಾಗಿದೆ. ಶ್ರೀರಾಮನವಮಿಯ ದಿನದಂದು ಸೂರ್ಯನ ಕಿರಣಗಳು ಶ್ರೀರಾಮನ ಮೇಲೆ ಬೀಳುವಂತೆ ಈ ವಿಗ್ರಹದ ಎತ್ತರವನ್ನು ನಿಗದಿಪಡಿಸಲಾಗಿದೆ. ಇಂದು ಪ್ರಧಾನಿ ಮೋದಿಯವರ ಕೈಯಿಂದ ಈ ಪ್ರಾಣಪ್ರತಿಷ್ಠಾ ವಿಧಿ ನೆರವೇರಿಸಲಾಯಿತು.

    ‘ನಮ್ಮ ರಾಮ ಅಯೋಧ್ಯೆಗೆ ಬಂದರು’: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts