More

    ‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?

    ಬೆಂಗಳೂರು: ದೇಶ ನಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಕುರಿತಾಗಿ ಸಿನಿಮಾ ರಂಗದವರು ಬಯೋಪಿಕ್​ಗಳು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿ ಬಿಟ್ಟಿದೆ. ಈಗಾಗಲೇ, ಅನೇಕ ಬಯೋಪಿಕ್​ಗಳು ಬಂದಿದ್ದು ಇನ್ನೂ ಅನೇಕ ಸಾಧಕರ ಬಯೋಪಿಕ್​ಗಳು ಮುಂದೆ ಬರಲಿವೆ. ಸದ್ಯಕ್ಕೆ, ‘ಭಾರತದ ಕೋಗಿಲೆ’, ‘ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಸರೋಜಿನಿ ನಾಯ್ಡು ಅವರ ಜೀವನವನ್ನು ಕುರಿತು ಒಂದು ಬಯೋಪಿಕ್ ನಿರ್ಮಾಣ ಆಗುತ್ತಿದೆ. 13 ಫೆಬ್ರವರಿ 1879 ಜನಿಸಿ, 1949 ಮಾರ್ಚ್ 2 ರಂದು ನಿಧನರಾದ ಸರೋಜಿನಿ ನಾಯ್ಡು ಅವರು 1925 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ನಂತರ 1947 ರಲ್ಲಿ ಯುನೈಟೆಡ್ ಪ್ರಾವಿನ್ಸ್‌ನ ಮೊದಲ ಗವರ್ನರ್ ಆಗಿ, ಬಳಿಕ ಭಾರತದ ಡೊಮಿನಿಯನ್‌ನಲ್ಲಿ ಗವರ್ನರ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
    ಬರೋಬ್ಬರಿ 50 ಡಿಗ್ರಿ ಬಿಸಿಲಿನಲ್ಲಿ, ನೀರೂ ಕುಡಿಯದೆ ಹೋರಾಟ ಮಾಡಿದವರು ಸರೋಜಿನಿ ನಾಯ್ಡು. ಅವರ ಹೆಸರು ಮಹಿಳೆಯರಿಗೆ ಇಂದಿಗೂ ಒಂದು ಶಕ್ತಿ ಎಂದೇ ಹೇಳಬೇಕು. ಹಾಗಾಗಿ, ಸದ್ಯ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸರೋಜಿನಿ ನಾಯ್ಡು ಅವರ ಬಗ್ಗೆ ಸಿದ್ಧವಾಗುತ್ತಿದೆ ಒಂದು ಬಯೋಪಿಕ್. ಅದರಲ್ಲಿಯೂ, ಈ ಬಯೋಪಿಕ್​ನ ಒಂದು ಹೈಲೈಟ್ ಅಂದರೆ ಅದು ಕನ್ನಡಿಗನಾದ ವಿನಯ್ ಚಂದ್ರ ಅವರು ಈ ಸಿನಿಮಾಗೆ ನಿರ್ದೇಶಕರು. ಹೌದು, ಈ ಸಿನಿಮಾ ಕನ್ನಡ ಮತ್ತು ಹಿಂದಿ, ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಚರಣ್ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಎಂಬ ಮೂವರು ಈ ಬಯೋಪಿಕ್​ಗೆ ನಿರ್ಮಾಪಕರಾಗಿದ್ದಾರೆ. ಇನ್ನು, ಸರೋಜಿನಿ ನಾಯ್ಡು ಅವರ ಬಗ್ಗೆ 8 ವರ್ಷಗಳಿಂದ ಅಧ್ಯಯನ ಮಾಡಿರುವ ಧೀರಜ್ ಮಿಶ್ರಾ ಅವರು ಚಿತ್ರಕ್ಕೆ ಬರಹಗಾರರಾಗಿದ್ದಾರೆ.
    ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತದ ನಿರ್ದೇಶನವನ್ನು ವಿನಯ್ ಚಂದ್ರ ಅವರೇ ವಹಿಸಿಕೊಂಡಿದ್ದಾರೆ. ಹಾಗಾದರೆ, ವಿಸ್ತಾ ಫಿಲಂಸ್ ವತಿಯಿಂದ ನಿರ್ಮಿಸಲಾಗುತ್ತಿರುವ ಈ ಸಿನಿಮಾದಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, ಸರೋಜಿನಿ ನಾಯ್ಡು ಅವರ ಯೌವನದ ಪಾತ್ರದಲ್ಲಿ ನಟಿ ಸೋನಲ್​ ಮಾಂತೆರೋ ಮಿಂಚಲಿದ್ದಾರೆ. ಇನ್ನು, ಸರೋಜಿನಿ ನಾಯ್ಡು ಅವರ ಹಿರಿ ವಯಸ್ಸಿನ ಪಾತ್ರದಲ್ಲಿ ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ನಟಿಸಿ ಬಳಷ್ಟು ಖ್ಯಾತಿ ಪಡೆದ ನಟಿ ಶಾಂತಿಪ್ರಿಯಾ ಅವರು ಕಾಣಿಸಿಕೊಳ್ಳಲಿದ್ದಾರೆ. ನಟಿ ಶಾಂತಿಪ್ರಿಯಾ ಅವರಿಗೆ ಮುನ್ನ ನಟಿ ದೀಪಿಕಾ ಚಿಖ್ಲಿಯಾ ಅವರು ಸರೋಜಿನಿ ನಾಯ್ಡು ಅವರ ಹಿರಿ ವಯಸ್ಸಿನ ಪಾತ್ರಕ್ಕೆ ಆಯ್ಕೆಯಾಗಿದ್ದರು. ಅದರೆ, ನಂತರ ಶಾಂತಿಪ್ರಿಯಾ ಅವರೇ ಈ ಪಾತ್ರಕ್ಕೆ ಫೈನಲ್ ಆಗಿದ್ದಾರೆ.
    ಹಾಗೆಯೇ, ಸರೋಜಿನಿ ನಾಯ್ಡು ಅವರ ಪತಿ, ವೈದ್ಯರಾಗಿದ್ದ ಗೋವಿಂದರಾಜುಲು ನಾಯ್ಡು ಪಾತ್ರದಲ್ಲಿ ಹಿಂದಿ ಧಾರಾವಾಹಿಗಳ, ಬಾಲಿವುಡ್ ಸಿನಿಮಾಗಳ ನಟ ಹಿತೇನ್ ತೇಜ್ವಾನಿ ನಟಿಸಲಿದ್ದಾರೆ. ಇನ್ನು, 28 ವರ್ಷಗಳ ಬಳಿಕ ನಟಿ ಶಾಂತಿಪ್ರಿಯ ಮತ್ತೆ ಬಣ್ಣ ಹಚ್ಚಲಿರುವುದು ವಿಶೇಷ. ಇದನ್ನು, ಕುರಿತು ಮಾತಾಡಿದ ನಟಿ, ‘28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೆಯೇ, ಸರೋಜಿನಿ ನಾಯ್ಡು ಅವರ ಯೌವನದ ಪಾತ್ರದಲ್ಲಿ ಮಿಂಚಲಿರುವ ನಟಿ ಸೋನಲ್​ ಮಾಂತೆರೋ ಅವರು, ‘ಈ ಕಥೆ ಕೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ನಾಯ್ಡು ಅವರ ಚಿಕ್ಕವಯಸ್ಸಿನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ದಿನಗಳ ಪಾತ್ರ ಮಾಡುತ್ತಿದ್ದೇನೆ‘, ಎಂದು ಸೋನಲ್ ಖುಷಿಯಿಂದ ಹೇಳಿಕೊಂಡಿದ್ದಾರೆ.

    ‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?

    ತುಂಬು ಗರ್ಭಿಣಿ ಸಂಜನಾ ತಲೆ ಬೋಳಿಸಿಕೊಂಡಿದ್ದಾರೆ! ಆದರೆ, ನೆಟ್ಟಿಗರಿಗೆ ಏನೋ ಅನುಮಾನ?

    ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಮೆಗಾ ಕುಟುಂಬದ ಕುಡಿ! ತಂದೆ ನಾಗಬಾಬು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts