More

    ಜಯದ ತವಕದಲ್ಲಿ ಕರ್ನಾಟಕ ತಂಡ ; ಇಂದಿನಿಂದ ಜಮ್ಮು-ಕಾಶ್ಮೀರ ಎದುರಾಳಿ

    ಚೆನ್ನೈ: ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ನಡುವೆಯೂ ರೈಲ್ವೇಸ್ ಎದುರು ಡ್ರಾಗೆ ತೃಪ್ತಿಪಟ್ಟುಕೊಂಡ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ತನ್ನ 2ನೇ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಐಐಟಿಸಿ ಮೈದಾನದಲ್ಲಿ ಗುರುವಾರದಿಂದ ನಡೆಯಲಿರುವ ಪಂದ್ಯ ಮನೀಷ್ ಪಾಂಡೆ ಬಳಗಕ್ಕೆ ಮಹತ್ವದ್ದಾಗಿದೆ. ಎಂಟರ ಘಟ್ಟಕ್ಕೆ ನೇರಪ್ರವೇಶ ಪಡೆಯಲು ಕರ್ನಾಟಕ ತಂಡ ಉಳಿದ 2 ಪಂದ್ಯಗಳಲ್ಲೂ ಜಯಿಸಬೇಕಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಲುವಾಗಿ ಬ್ಯಾಟರ್ ಮಯಾಂಕ್ ಅಗರ್ವಾಲ್ ತಂಡ ತೊರೆದಿದ್ದಾರೆ. ಅನುಭವಿ ಆಟಗಾರ ಕರುಣ್ ನಾಯರ್ ಹಾಗೂ ಪ್ರಸಿದ್ಧ ಕೃಷ್ಣ ತಂಡ ಕೂಡಿಕೊಂಡಿದ್ದು, ಬ್ಯಾಟಿಂಗ್ ಹಾಗು ಬೌಲಿಂಗ್ ಬಲ ಹೆಚ್ಚಿಸಿದ್ದಾರೆ.

    ಕರ್ನಾಟಕಕ್ಕೆ ಗೆಲುವಿನ ನಿರೀಕ್ಷೆ:
    ರೈಲ್ವೇಸ್ ಎದುರು ಮನೀಷ್ ಪಾಂಡೆ, ಸಮರ್ಥ್ ಹಾಗೂ ಕೆವಿ ಸಿದ್ದಾರ್ಥ್ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಸ್ಪಿನ್ನರ್ ಕೆ.ಗೌತಮ್ ಮಿಂಚಿದ್ದರು. ಅನುಭವಿ ಪ್ರಸಿದ್ಧ ಕೃಷ್ಣ ಆಗಮನದಿಂದಾಗಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದ್ದು, ವೈಶಾಕ್ ವಿಜಯ್‌ಕುಮಾರ್ ಅಥವಾ ವಿದ್ಯಾಧರ್ ಪಾಟೀಲ್ ಇಬ್ಬರಲ್ಲಿ ಒಬ್ಬರು ಹೊರಗುಳಿಯಲಿದ್ದಾರೆ. ಮಯಾಂಕ್ ಬದಲಿಗೆ ಕರುಣ್ ನಾಯರ್ ಹನ್ನೊಂದರ ಬದಲಿಗೆ ಕಾಣಿಸಿಕೊಳ್ಳಲಿದ್ದಾರೆ.

    ಆತ್ಮವಿಶ್ವಾಸದಲ್ಲಿ ಜಮ್ಮುಕಾಶ್ಮೀರ:
    ಮೊದಲ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಮಣಿಸಿ ಎಲೈಟ್ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜಮ್ಮು-ಕಾಶ್ಮೀರ ತಂಡ ಆತ್ಮವಿಶ್ವಾಸದಲ್ಲಿದೆ. 2019-20ನೇ ಸಾಲಿನ ಎಂಟರ ಘಟ್ಟದಲ್ಲಿ ಕರ್ನಾಟಕ ತಂಡದ ಎದುರು ಸೋಲನುಭವಿಸಿತ್ತು. ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ಖಮ್ರಾನ್ ಇಕ್ಬಾಲ್ ಹಾಗೂ ಜತಿನ್ ವಾಧ್ವಾನ್‌ರಂಥ ಆಟಗಾರರನ್ನು ಹೊಂದಿರುವ ಜಮ್ಮು-ಕಾಶ್ಮೀರ ಬಲಿಷ್ಠ ತಂಡದ ಸವಾಲಿಗೆ ಸಜ್ಜಾಗಿದೆ. ಕರ್ನಾಟಕದ ಎದುರು ಆಡಿರುವ ಹಿಂದಿನ 3 ಪಂದ್ಯಗಳಲ್ಲೂ ಸೋಲು ಕಂಡಿರುವ ಜಮ್ಮು-ಕಾಶ್ಮೀರ ತಂಡ ಸೇಡಿನ ತವಕದಲ್ಲಿದೆ.

    ರಹಾನೆ, ಪೂಜಾರಗೆ ಅಗ್ನಿಪರೀಕ್ಷೆ
    ಮೊದಲ ಸುತ್ತಿನ ಪಂದ್ಯಗಳಲ್ಲಿ ಮಿಶ್ರ ಲಕಂಡಿರುವ ಮುಂಬೈ ತಂಡದ ಅಜಿಂಕ್ಯ ರಹಾನೆ ಹಾಗೂ ಸೌರಾಷ್ಟ್ರ ತಂಡದ ಚೇತೇಶ್ವರ ಪೂಜಾರಗೆ ಈ ಸುತ್ತಿನ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಸೌರಾಷ್ಟ್ರ ಎದುರು ಮೊದಲ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದ್ದರೆ, ಪೂಜಾರ ಮುಂಬೈ ಎದುರು ಶೂನ್ಯ ಹಾಗೂ 91 ರನ್ ಗಳಿಸಿದ್ದರು. ಈ ಬಾರಿ ಸೌರಾಷ್ಟ್ರ ತಂಡ ಒಡಿಶಾವನ್ನು ಎದುರಿಸಿದರೆ, ಮುಂಬೈ ತಂಡ ಗೋವಾವನ್ನು ಎದುರಿಸಲಿದೆ.

    *ಪಂದ್ಯ ಆರಂಭ: ಬೆಳಗ್ಗೆ 9.30

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts