More

    ಶರಣಬಸಪ್ಪನ ಹೆಸರಲ್ಲಿ ತಿಂದು ತೇಗಿದರು: ಮಾಜಿ ಸಚಿವ ನಾಗಪ್ಪ ಸಾಲೋಣಿ ಆರೋಪ

    ಕಾರಟಗಿ: ಶರಣಬಸವೇಶ್ವರ ಬ್ಯಾಂಕ್ ಸಂಸ್ಥಾಪಕರಲ್ಲಿ ನಾನೂ ಒಬ್ಬ. ಆದರೆ, ಕೆಲವರು ಶರಣಬಸಪ್ಪನ ಹೆಸರಲ್ಲಿ ತಿಂದು ತೇಗುವ ಮೂಲಕ ಇಡೀ ಬ್ಯಾಂಕನ್ನೇ ಮುಳುಗಿಸಿದ್ದಾರೆ ಎಂದು ಮಾಜಿ ಸಚಿವ ನಾಗಪ್ಪ ಸಾಲೋಣಿ ಆರೋಪಿಸಿದರು. ಪಟ್ಟಣದ ಆರ್‌ಜಿ ಮುಖ್ಯರಸ್ತೆಯಲ್ಲಿ ಸುಕೋ ಬ್ಯಾಂಕ್‌ನ 29ನೇ ನೂತನ ಶಾಖೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

    ಎಲ್ಲ ಸಮುದಾಯಗಳನ್ನು ಒಳಗೊಂಡು ಸಹಕಾರ ತತ್ವದಡಿ ಆರ್ಥಿಕ ಅಭಿವೃದ್ಧಿಗಾಗಿ ಶರಣಬಸವೇಶ್ವರ ಸಹಕಾರ ಬ್ಯಾಂಕ್ ಸ್ಥಾಪಿಸಲಾಯಿತು. ಸಾಮಾನ್ಯ ಜನರು ಮತ್ತು ಪ್ರಾಮಾಣಿಕರಿಗೆ ಸಾಲ ನೀಡದೆ, ಬಣ್ಣದ ಮಾತುಗಳನ್ನಾಡುವವರಿಗೆ ಕೇಳಿದಷ್ಟು ಸಾಲ ನೀಡಲಾಯಿತು. ಅದು ಈವರೆಗೆ ಮರುಪಾವತಿಯಾಗಿಲ್ಲ. ನಿರ್ದೇಶಕರು ಬ್ಯಾಂಕ್‌ನಲ್ಲಿ ಸಾಲಪಡೆಯಬಾರದು ಎನ್ನುವ ನಿಯಮವಿದ್ದರೂ ಉಲ್ಲಂಘಿಸಿದ್ದಾರೆ. ವೈಯಕ್ತಿಕ ಕೆಲಸಗಳಿಗೆ ತೆರಳಿದರೂ ಬ್ಯಾಂಕ್‌ಗೆ ಖರ್ಚು ತೋರಿಸಿದ್ದಾರೆ. ಹೀಗಾದರೆ, ಬ್ಯಾಂಕ್ ಎಲ್ಲಿಂದ ಅಭಿವೃದ್ಧಿಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಈಗ ಶರಣಬಸವೇಶ್ವರ ಬ್ಯಾಂಕನ್ನು ಸುಕೋ ಬ್ಯಾಂಕ್‌ನೊಂದಿಗೆ ವಿಲೀನ ಮಾಡಲಾಗುತ್ತಿದೆ. ಯಾವ ನಿರ್ದೇಶಕರು ಬಂದಿಲ್ಲ. ವೈಯಕ್ತಿಕ ಮತ್ತು ಕುಟುಂಬ ಸ್ವಾರ್ಥಕ್ಕಾಗಿ ಬ್ಯಾಂಕ್, ಶಿಕ್ಷಣ ಸಂಸ್ಥೆ ಹಾಗೂ ದೇವಸ್ಥಾನವನ್ನೇ ದಿವಾಳಿ ಎಬ್ಬಿಸಿದ್ದಾರೆ ಎಂದು ಆರೋಪಿಸಿದರು.\

    ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ನಾಗರಾಜ ಅರಳಿ ಮಾತನಾಡಿ, ಶರಣಬಸವೇಶ್ವರ ಬ್ಯಾಂಕ್‌ಗೆ ನಾನೂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಸುಕೋಬ್ಯಾಂಕ್‌ನೊಂದಿಗೆ ವೀಲಿವಾಗುತ್ತಿದೆ. ಭವಿಷ್ಯದಲ್ಲಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳು ದೊರೆಯಲೆಂದು ಆಶಿಸುತ್ತೇನೆ ಎಂದರು. ಉದ್ಯಮಿಗಳಾದ ಎಲ್‌ವಿಟಿ ಸೂಗಪ್ಪ, ಪಿ.ಗೋವಿಂದರಾಜ್, ವೀರೇಶಪ್ಪ ಚಿನಿವಾಲ ಇತರರಿದ್ದರು.

    ಕೋವಿಡ್ ಸಂಕಷ್ಟ ಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸುಕೋ ಬ್ಯಾಂಕ್ ಸಹಕಾರದೊಂದಿಗೆ ಉತ್ತಮ ಸೇವೆ ಸಲ್ಲಿಸಿದ್ದೇವೆ. ಖಾಸಗಿ ಗೋದಾಮು ಮತ್ತು ಮೊಟ್ಟ ಮೊದಲ ಬಾರಿಗೆ ಕ್ಯೂಆರ್ ಕೋಡ್ ಸೇವೆ ಆರಂಭಿಸಿದ್ದೇ ಸುಕೋ ಬ್ಯಾಂಕ್. ಜನಸ್ನೇಹಿಯಾಗಿ ಕರ್ತವ್ಯನಿರ್ವಹಿಸಲು ಬ್ಯಾಂಕ್ ಸದಾ ಬದ್ಧವಾಗಿದೆ.
    | ಮೋಹಿತ್ ಮಸ್ಕಿ, ಸುಕೋ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts