More

    ಕಾರಟಗಿ ಪುರಸಭೆ ಚುನಾವಣೆ, ಅಲ್ಲಲ್ಲಿ ಮಾತಿನ ಚಕಮಕಿ, ಬೆದರಿಕೆ

    ಕಾರಟಗಿ: ಪುರಸಭೆಯ ಎರಡನೇ ಅವಧಿಗೆ ಸೋಮವಾರ ಮತದಾನ ನಡೆಯಿತು. 22ವಾರ್ಡ್‌ಗಳ 25 ಬೂತ್‌ಗಳಲ್ಲಿ ಬೆಳಗ್ಗೆ 7ರಿಂದ ಆರಂಭಗೊಂಡ ಮತದಾನ ನಂತರ ಬಿರುಸಿನಿಂದ ಸಾಗಿತು. ಸಣ್ಣಪುಟ್ಟ ಮಾತಿನ ಚಕಮಕಿ ಹಾಗೂ ಬೆದರಿಕೆ ಹಾಕಿದಂತಹ ಘಟನೆಗಳು ನಡೆದವು.

    ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಶಾಸಕ ಬಸವರಾಜ ದಢೇಸುಗೂರು, 13ನೇ ವಾರ್ಡ್ ಮತದಾನ ಕೇಂದ್ರದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. 4ನೇ ವಾರ್ಡ್‌ನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಸಚಿವ ನಾಗಪ್ಪ ಸಾಲೋಣಿ ಮತದಾನ ಮಾಡಿದರು.

    ಬೆದರಿಕೆ: ವಾರ್ಡ್‌ವೊಂದರಲ್ಲಿ ರಾಜಕೀಯ ನಾಯಕರೊಬ್ಬರ ಬೆಂಬಲಿಗರು ತಮ್ಮ ಅಭ್ಯರ್ಥಿ ಸೋತರೆ ಇದೇ ನಿಮಗೆ, ಊರಲ್ಲಿ ಅದೇಗೆ ಜೀವನ ನಡೆಸುತ್ತೀರಿ ನಾವು ನೋಡುತ್ತೇವೆಂದು ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಮತ ಪಡೆಯಲು ಮುಂದಾಗಿರುವುದು ಪಟ್ಟಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 6ನೇ ವಾರ್ಡ್ ಮಹಾದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts